reaction ರಿಆಕ್‍ಷನ್‍
ನಾಮವಾಚಕ
  1. (ಪರಿಸ್ಥಿತಿ, ಪ್ರಚೋದನೆ, ಪ್ರಭಾವ, ವ್ಯಕ್ತಿ, ಘಟನೆ ಮೊದಲಾದವುಗಳಿಗೆ ತೋರಿಸುವ) ಪ್ರತಿಕ್ರಿಯೆ; ಪ್ರತಿವರ್ತನೆ; ಪ್ರತಿಪರಿಣಾಮ; action and reaction ಕ್ರಿಯೆ ಮತ್ತು ಪ್ರತಿಕ್ರಿಯೆ; ವರ್ತನೆ ಮತ್ತು ಪ್ರತಿವರ್ತನೆ.
  2. ಪ್ರತಿಕ್ರಿಯೆ:
    1. ಪ್ರತಿಕ್ರಿಯಾ ರೂಪದ ಭಾವ, ಭಾವನೆ: what was his reaction to the news? ಸುದ್ದಿ ಕೇಳಿ ಅವನ ಪ್ರತಿಕ್ರಿಯೆ ಏನಾಗಿತ್ತು?
    2. ತತ್‍ಕ್ಷಣದ ಯಾ ಪ್ರಾಥಮಿಕ – ಅಭಿಪ್ರಾಯ, ಅನಿಸಿಕೆ.
  3. ದೈಹಿಕ ಪ್ರತಿಕ್ರಿಯೆ; ಪ್ರಚೋದನೆಗೆ, ಮುಖ್ಯವಾಗಿ ಔಷಧಿಗೆ, ದೈಹಿಕವಾದ, ಅಂದರೆ ನರಗಳ ಯಾ ಸ್ನಾಯುಗಳ, ಪ್ರತಿಕ್ರಿಯೆ.
  4. ಪ್ರತಿರೋಧ; ಇನ್ನೊಂದು ಕಾರ್ಯಕ್ಕೆ, ಉದಾಹರಣೆಗೆ ಊತಕ ಮೊದಲಾದವುಗಳಲ್ಲಿ ಅನ್ಯವಸ್ತುಗಳಿಗೆ, ತೋರಿಸುವ ವಿರೋಧ.
  5. ಪ್ರತ್ಯಾವೃತ್ತಿ; ಪ್ರತ್ಯಾವರ್ತನೆ; (ದೇಹಸ್ಥಿತಿ, ಮಾರುಕಟ್ಟೆ, ಮೊದಲಾದವುಗಳ ವಿಷಯದಲ್ಲಿ) ಬದಲಾಯಿಸಿದ್ದ ಸ್ಥಿತಿ ಮತ್ತೆ ಪೂರ್ವಸ್ಥಿತಿಗೆ ಹಿಂದಿರುಗುವಿಕೆ.
  6. ಪ್ರತಿಗಾಮಿತ್ವ; ಪ್ರಗತಿ ವಿರೋಧ; ಯಾವುದೇ ರಾಜಕೀಯ ಯಾ ಸಾಮಾಜಿಕ ಬದಲಾವಣೆಯನ್ನು ವಿರೋಧಿಸುವ ಯಾ ಹಿಂದಿದ್ದ ಪರಿಸ್ಥಿತಿಗೆ ಮರಳಬೇಕೆನ್ನುವ ಪ್ರವೃತ್ತಿ, ಒಲವು.
  7. (ರಸಾಯನವಿಜ್ಞಾನ ಮೊದಲಾದವುಗಳಲ್ಲಿ) ಕ್ರಿಯೆ; ಪದಾರ್ಥಗಳು ರಾಸಾಯನಿಕವಾಗಿ ವರ್ತಿಸಿ ರಾಸಾಯನಿಕ ಬದಲಾವಣೆ ಹೊಂದುವ ಕ್ರಿಯೆ.
  8. (ಭೌತವಿಜ್ಞಾನ) ವಿಮುಖ, ಪ್ರತಿಮುಖಚಾಲನೆ; ಉದ್ದಿಷ್ಟ ದಿಕ್ಕಿಗೆ ವಿದುದ್ಧವಾದ ದಿಕ್ಕಿನಲ್ಲಿ ಕಣಗಳು ಮೊದಲಾದವನ್ನು ಸೂಸಿ ಯಾ ವಿಸರ್ಜಿಸಿ ಪಡೆಯುವ ಚಾಲನೆ.
  9. ವಿಮುಖ ಕ್ರಿಯೆ; ಹಿಮ್ಮೊಗವಾಗಿ, ವಿರುದ್ಧ ದಿಕ್ಕಿನಲ್ಲಿ ಯಾ ರೀತಿಯಲ್ಲಿ ನಡೆಯುವ ಕ್ರಿಯೆ.