react ರಿಆಕ್ಟ್‍
ಅಕರ್ಮಕ ಕ್ರಿಯಾಪದ
  1. ಪ್ರತಿಕ್ರಿಯಿಸು; ಪ್ರತಿಕ್ರಿಯೆ – ತೋರು, ನೀಡು; ಯಾವುದೇ ಪ್ರಚೋದನೆಗೆ ಪ್ರತಿಕ್ರಿಯೆ ತೋರಿಸು; ಯಾವುದೇ ಪ್ರಭಾವಕ್ಕೆ ತಕ್ಕುದಾದ ಪರಿಣಾಮ ಹೊಂದು ಯಾ ಪ್ರತಿವರ್ತನೆ ತೋರಿಸು: how did they react to the news? ಸುದ್ದಿಗೆ ಅವರು ಹೇಗೆ ಪ್ರತಿಕ್ರಿಯಿಸಿದರು? ಯಾವ ಪ್ರತಿಕ್ರಿಯೆ ತೋರಿಸಿದರು?
  2. ವಿರುದ್ಧವಾಗಿರು; ವಿರುದ್ಧ ಪ್ರತಿಕ್ರಿಯೆ ಯ ವರ್ತನೆ ಯಾ ಪ್ರವೃತ್ತಿ ತೋರಿಸು: reacted to insult ಅಪಮಾನಕ್ಕೆ ವಿರೋಧ ತೋರಿದ.
  3. ಪರಸ್ಪರ ಪ್ರಭಾವ, ಪರಿಣಾಮ ಉಂಟುಮಾಡು; ಕರ್ತೃವಿನ ಮೇಲೆ ಪರಿಣಾಮ ಮಾಡು, ಕಾರ್ಯಮಾಡು; ಪ್ರತಿಪರಿಣಾಮ ಮಾಡು: they react upon each other ಅವರು ಪರಸ್ಪರ ಪರಿಣಾಮ ಬೀರುತ್ತಾರೆ.
  4. (ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ) (ಪದಾರ್ಥ ಯಾ ಕಣದ ವಿಷಯದಲ್ಲಿ) ವರ್ತಿಸು; ಕ್ರಿಯೆಯಲ್ಲಿ ತೊಡಗು; ಇನ್ನೊಂದರೊಂದಿಗೆ ಕ್ರಿಯೆಯಲ್ಲಿ ಪಾಲ್ಗೊಳ್ಳು; ಕ್ರಿಯಾನ್ವಿತವಾಗು: hydrochloric acid does not react with gold ಹೈಡ್ರೋಕ್ಲೋರಿಕ್‍ ಆಮ್ಲ ಚಿನ್ನದೊಡನೆ ವರ್ತಿಸುವುದಿಲ್ಲ, ಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ.
  5. (ಸೈನ್ಯ) ಪ್ರತಿದಾಳಿ ಮಾಡು; ವಿರುದ್ಧಾಕ್ರಮಣ ನಡೆಸು.
  6. (ಸ್ಟಾಕ್‍ ಎಕ್ಸ್‍ಚೇಂಜ್‍) (ಹುಂಡಿಗಳ, ಸ್ಟಾಕುಗಳ ವಿಷಯದಲ್ಲಿ) ಏರಿ ಕುಸಿ; ಏರಿದ ಅನಂತರ ಬೀಳು, ಕುಸಿ, ಇಳಿ.
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ಕ್ರಿಯೆಗೊಳಪಡಿಸು: he tried to react gold with hydrochloric acid ಅವನು ಚಿನ್ನವನ್ನು ಹೈಡ್ರೋಕ್ಲೋರಿಕ್‍ ಆಮ್ಲದೊಡನೆ ಕ್ರಿಯೆಗೊಳಪಡಿಸಲು ಯತ್ನಿಸಿದ.