re- ರೀ-, ರಿ-, ರೆ-
ಪೂರ್ವಪ್ರತ್ಯಯ

ಯಾವುದೇ ಕ್ರಿಯಾಪದಕ್ಕೆ ಯಾ ಅದರ ಜನ್ಯಪದಕ್ಕೆ ಈ ಅರ್ಥಗಳಲ್ಲಿ ಸೇರಿಸುವ ಪೂರ್ವಪ್ರತ್ಯಯ:

  1. ಮತ್ತೊಮ್ಮೆ; ತಿರುಗಿ; ಮರಳಿ; ಹೊಸದಾಗಿ; ಪುನಃ: readjust, renumber.
  2. ಮೊದಲಿದ್ದ ಸ್ಥಿತಿಗೆ ವಿರುದ್ಧವಾದ ಸ್ಥಿತಿ ಯಾ ಕ್ರಿಯೆ ಉಂಟಾಗಿದ್ದು ಮತ್ತೆ ಹಿಂದಿನಸ್ಥಿತಿಗೆ, ಪೂರ್ವಸ್ಥಿತಿಗೆ: reassemble, reverse [ಮುಂದಿನ ಪದವು e ಎಂಬ ಅಕ್ಷರದಿಂದ ಪ್ರಾರಂಭವಾದರೆ (ಉದಾಹರಣೆಗೆ reenact) ಯಾ ಸಮಸ್ತಪದವನ್ನು ಹೆಚ್ಚು ಬಳಕೆಯ ಏಕಪದರೂಪದಿಂದ ಬೇರೆಯೆಂದು ಗುರಿತಿಸಲು (ಉದಾಹರಣೆಗೆ re-form) ‘-’ ಚಿಹ್ನೆಯನ್ನು ಸಾಮಾನ್ಯವಾಗಿ ಬಳಸಲಾಗುವುದು].
  3. ಪ್ರತಿಯಾಗಿ; ಪರಸ್ಪರ: react, resemble.
  4. ವಿರುದ್ಧವಾಗಿ: repel, resist
  5. ಹಿಂದೆ ಯಾ ನಂತರ; ಹಿಂದೆ ಇದ್ದ ಯಾ ಅನಂತರ ನಡೆದ: relic, remain.
  6. ಏಕಾಂತ ಯಾ ರಹಸ್ಯ: recluse, recondite
  7. ಮತ್ತೆ ಮತ್ತೆ, ಪುನರಾವರ್ತಿಸುವಂತೆ ಯಾ ಬಹಳ, ತೀರ, ಚೆನ್ನಾಗಿ ಎಂಬ ಆಧಿಕ್ಯಾರ್ಥದಲ್ಲಿ: redouble, refine, resplendent.
  8. ಬೇಡ, ಆಗದು, ಬಾರದು, ಕೂಡದು, ಸಲ್ಲದು ಮೊದಲಾದ ನಿಷೇಧಾರ್ಥದಲ್ಲಿ: recant, reveal, resign.
  9. ದೂರಕ್ಕೆ, ಆಚೆಗೆ, ಕೆಳಕ್ಕೆ: recede, relegate, repress.