razor-edge ರೇಸರ್‍ಎಜ್‍
ನಾಮವಾಚಕ
  1. ಕ್ಷೌರಕತ್ತಿಯ ಅಲಗು; ಕ್ಷುರಧಾರೆ; ಕ್ಷುರಾಗ್ರ.
  2. ಕ್ಷುರಾಗ್ರದಂತೆ ಮೊನಚಾದ ಬೆಟ್ಟದ ಏಣು.
  3. (ರೂಪಕವಾಗಿ) ಕ್ಷುರಧಾರಾ ಸನ್ನಿವೇಶ; ಅಸಿಧಾರಾ ಸ್ಥಿತಿ; ವಿಷಮಪರಿಸ್ಥಿತಿ: found themselves on a razor-edge ವಿಷಮ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡರು.
  4. ಅತಿ ಸೂಕ್ಷ್ಮವಾದ ವಿಭಾಜಕ ರೇಖೆ; ಸೂಕ್ಷ್ಮಭೇದ; ಸೂಕ್ಷ್ಮಾಂತರ.
  5. ಚೂಪಾದ ಅಲಗು; ಹರಿತವಾದ ಅಂಚು.
ಪದಗುಚ್ಛ

be on razor-edge (or razor’s edge) ಅಸಿಧಾರಾವ್ರತದಲ್ಲಿರುವಂತಿರು; ಉಗ್ರ ಅಪಾಯದ ಸ್ಥಿತಿಯಲ್ಲಿರು.