raze ರೇಸ್‍ಕೆ -೧
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ತರಚುಗಾಯ, ಸವರುಗಾಯ, ಉಜ್ಜುಗಾಯ – ಮಾಡು.
  2. (ಸಾಮಾನ್ಯವಾಗಿ ರೂಪಕವಾಗಿ) (ವ್ಯಕ್ತಿಯ ಹೆಸರು ಮೊದಲಾದವನ್ನು) ತೊಡೆದುಹಾಕು; ಅಳಿಸಿಬಿಡು; ಹೊಡೆದುಹಾಕಿಬಿಡು. raze a person’s name from the list ವ್ಯಕ್ತಿಯ ಹೆಸರನ್ನು ಪಟ್ಟಿಯಿಂದ ಹೊಡೆದುಹಾಕಿಬಿಡು. raze person’s name from remembrance ವ್ಯಕ್ತಿಯ ಹೆಸರನ್ನು ಸ್ಮೃತಿಯಿಂದ ತೊಡೆದುಹಾಕಿಬಿಡು.
  3. (ಊರು, ಮನೆ, ಗೋಡೆಗಳು ಮೊದಲಾದವನ್ನು) ಹಾಳುಗೆಡವು; ನೆಲಸಮ ಮಾಡು; ಧ್ವಂಸಮಾಡು; ತೊಡೆದುಹಾಕಿ ಬಿಡು: razed the whole town ಇಡೀ ಪಟ್ಟಣವನ್ನೇ ಧ್ವಂಸಮಾಡಿ ಬಿಟ್ಟ. raze a building to the ground ಕಟ್ಟಡವನ್ನು ನೆಲಸಮ ಮಾಡಿಬಿಡು.