See also 2raw
1raw ರಾ
ಗುಣವಾಚಕ
  1. ಬೇಯಿಸಿಲ್ಲದ; ಅಡಿಗೆ ಮಾಡಿಲ್ಲದ; ಅಟ್ಟಿಲ್ಲದ; ಹಸಿಯ.
  2. ಹಸಿಯ; ಕಾಯಿಸದ; ಸುಟ್ಟಿಲ್ಲದ: raw cream ಕಾಯಿಸದ, ಹಸಿಯ (ಹಾಲಿನ) ಕೆನೆ. raw brick ಹಸಿ ಇಟ್ಟಿಗೆ; ಸುಟ್ಟಿಲ್ಲದ ಇಟ್ಟಿಗೆ.
  3. (ರೇಷ್ಮೆಯ ವಿಷಯದಲ್ಲಿ) ಕಚ್ಚಾ;ಸಂಸ್ಕರಿಸದ; ರೇಷ್ಮೆಗೂಡಿನಿಂದ ನೇರವಾಗಿ ರಾಟೆಗೆ ಸುತ್ತಿ ತೆಗೆದ: raw silk ಕಚ್ಚಾ ರೇಷ್ಮೆ; ಸಂಸ್ಕರಿಸದ ರೇಷ್ಮೆ.
  4. (ಪದಾರ್ಥಗಳ ವಿಷಯದಲ್ಲಿ) ಹದಗೊಳಿಸದ; ಕಚ್ಚಾ; ಸಂಸ್ಕರಿಸದ.
  5. ಅಪ್ಪಟ; ಶುದ್ಧ; ಅಮಿಶ್ರಿತ; ಬೆರಸದ; ತಿಳಿಮಾಡಿಲ್ಲದ; ಮೂಲ ಸ್ಥಿತಿಯಲ್ಲೇ ಇರುವ: raw spirit ಅಪ್ಪಟ ಮದ್ಯ; ನೀರು ಬೆರಸದ ಮದ್ಯ.
  6. (ಬಟ್ಟೆಯ ವಿಷಯದಲ್ಲಿ) ರಟ್ಟುಗಟ್ಟಿಸಿಲ್ಲದ: raw cloth ರಟ್ಟುಗಟ್ಟಿಸಿಲ್ಲದ ಬಟ್ಟೆ.
  7. (ಧಾನ್ಯದ ವಿಷಯದಲ್ಲಿ) ಮೊಳಕೆಗಟ್ಟಿಲ್ಲದ: raw grain ಮೊಳಕೆ ಕಟ್ಟಿಲ್ಲದ ಧಾನ್ಯ.
  8. (ಕಲಾದೃಷ್ಟಿಯಿಂದ) ನಯವಿಲ್ಲದ; ಅಸಂಸ್ಕೃತ.
  9. (ವ್ಯಕ್ತಿಯ ವಿಷಯದಲ್ಲಿ) ನುರಿತಿಲ್ಲದ; ಅನುಭವವಿಲ್ಲದ; ಅಶಿಕ್ಷಿತ; ಅಕುಶಲ; ಹೊಸಬ: a raw lad ಅನುಭವವಿಲ್ಲದ ಬಾಲಕ. a raw recruit ಅನುಭವವಿಲ್ಲದ ಹೊಸಬ.
  10. ಹಸಿಚರ್ಮ ಎಡೆದು ಹೋದ; ತರಚುಗಾಯದ; ಮಾಂಸ ಕಾಣುವಂತಿರುವ; ತರಚುಗಾಯದಿಂದಾಗಿ. ಮುಟ್ಟಿದರೆ ನೋಯುವ: raw wound ಹಸಿಗಾಯ.
  11. (ಬಟ್ಟೆಯ ಅಂಚಿನ ವಿಷಯದಲ್ಲಿ) ಅಂಚಿಲ್ಲದ; ಅಂಚು, ಕರೆಕಟ್ಟಿಲ್ಲದ: raw edge, border ಅಂಚಿಲ್ಲದ ಅರಿವೆ, ಬಟ್ಟೆ.
  12. (ಹವಾ, ದಿನ, ಗಾಳಿ ಮೊದಲಾದವುಗಳ ವಿಷಯದಲ್ಲಿ) (ಕೆಲವೊಮ್ಮೆ ಮಂಜು ಮುಸುಕಿ) ಥಂಡಿಯಿಂದ ಕೊರೆಯುವ; ಶೈತ್ಯಚಳಿಯ.
  13. (ಅಂಕಿ ಅಂಶ ಮೊದಲಾದವುಗಳ ವಿಷಯದಲ್ಲಿ) ಅಪರಿಷ್ಕೃತ; ವಿಶ್ಲೇಷಣೆ ಯಾ ಸಂಸ್ಕರಣ ಮಾಡಿಲ್ಲದ.
  14. ಒರಟಾಗಿರುವ; ಸಂಸ್ಕಾರಗೊಳಿಸದ; ನಯಗೊಳಿಸದ: his style is still rather raw ಅವನ ಶೈಲಿ ಇನ್ನೂ ಸ್ವಲ್ಪ ಒರಟೇ.
  15. ವಾಸ್ತವಿಕ; ಸತ್ಯದ; ಯಥಾವತ್ತಾದ ಮುಚ್ಚುಮರೆ ಮಾಡದ: a raw portrayal of working-class life ಕಾರ್ಮಿಕ ಜೀವನದ ಯಥಾವತ್ತಾದ ನಿರೂಪಣೆ, ವಾಸ್ತವಿಕ ನಿರೂಪಣೆ.
ಪದಗುಚ್ಛ
  1. come the raw prawn (ಆಸ್ಟ್ರೇಲಿಯ) (ಅಶಿಷ್ಟ) ವಂಚಿಸಲು ಪ್ರಯತ್ನಿಸು.
  2. raw head and bloody bones
    1. (ಎಳೆಯ ಮಕ್ಕಳನ್ನು ಹೆದರಿಸಲು ಬಳಸುವ ಮಾತಾಗಿ) ಕರಡಿಗುಮ್ಮ.
    2. (ಮೃತ್ಯುವಿನ ಸಂಕೇತವಾಗಿ) ತಲೆಬುರುಡೆ ಹಾಗೂ ಅದರಡಿಯಲ್ಲಿ ಕತ್ತರಿ ಆಕಾರದಲ್ಲಿಡುವ ಎರಡು ಎಲುಬುಗಳು.
    3. ( ಗುಣವಾಚಕ) (ಕಥನಶೈಲಿ ಮೊದಲಾದವುಗಳ ವಿಷಯದಲ್ಲಿ) ಬೀಭತ್ಸವಾದ; ಭೀಕರವೂ ಅಸಹ್ಯವೂ ಆದ.
See also 1raw
2raw ರಾ
ನಾಮವಾಚಕ

(ವ್ಯಕ್ತಿಯ ಯಾ ಕುದುರೆಯ) ಮೈಮೇಲಿನ ಚರ್ಮ ಎಡೆದು ಹೋದ ಜಾಗ; ತರಚುಗಾಯ.

ಪದಗುಚ್ಛ
  1. in the raw
    1. ಯಥಾಸ್ಥಿತಿಯಲ್ಲಿ; ಯಥಾವತ್ತಾಗಿ; (ಸ್ವಲ್ಪವೂ ಬದಲಾಯಿಸದ) ಸಹಜಸ್ಥಿತಿಯಲ್ಲಿ; ವಾಸ್ತವದಲ್ಲಿ ಇರುವುದಕ್ಕಿಂತ ಚೆನ್ನಾಗಿ ಹಿತವಾಗಿ, ಮೊದಲಾದ್ದಾಗಿ ಮಾಡಿರದೆ: life in the raw ಸಹಜ (ಸ್ಥಿತಿಯ) ಬದುಕಿನಲ್ಲಿ.
    2. (ಆಡುಮಾತು) ಬತ್ತಲಾಗಿ; ನಗ್ನವಾಗಿ.
  2. touch on the raw ಸೂಕ್ಷ್ಮ ವಿಷಯದಲ್ಲಿ ಕೆಣಕಿ (ವ್ಯಕ್ತಿಯನ್ನು) ಕೆರಳಿಸು, (ವ್ಯಕ್ತಿಯ) ಮನಸ್ಸು ನೋಯಿಸು.