See also 2ravel
1ravel ರ್ಯಾವ(ವ್‍)ಲ್‍
ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ ravelled (ಅಮೆರಿಕನ್‍ ಪ್ರಯೋಗ raveled);

ವರ್ತಮಾನ ಕೃದಂತ ravelling (ಅಮೆರಿಕನ್‍ ಪ್ರಯೋಗ raveling)].

ಸಕರ್ಮಕ ಕ್ರಿಯಾಪದ
  1. (ದಾರ ಮೊದಲಾದವನ್ನು ಯಾ ವಿಷಯ, ಸಮಸ್ಯೆ ಮೊದಲಾದವನ್ನು) ತೊಡಕುಗೊಳಿಸು; ಸಿಕ್ಕುಸಿಕ್ಕಾಗಿಸು; ಜಟಿಲಗೊಳಿಸು.
  2. (ಸಾಮಾನ್ಯವಾಗಿ ravel out) ಸಿಕ್ಕು, ತೊಡಕು, ಗಂಟು – ಬಿಡಿಸು.
  3. ಎಳೆಎಳೆಯಾಗಿ ಕಿತ್ತುಬಿಡು; ಎಳೆಎಳೆಯಾಗಿ ಕಿತ್ತು ಬಿಡಿಸು.
  4. (ರೂಪಕವಾಗಿ) (ವಿಷಯದ, ಸಮಸ್ಯೆಯ) ವಿವರಗಳನ್ನು – ಬಿಡಿಸು, ಪ್ರತ್ಯೇಕಿಸು.
ಅಕರ್ಮಕ ಕ್ರಿಯಾಪದ
  1. (ದಾರ ಮೊದಲಾದವುಗಳ ಯಾ ವಿಷಯ, ಸಮಸ್ಯೆ ಮೊದಲಾದವುಗಳ ವಿಷಯದಲ್ಲಿ) ತೊಡಕುಗೊಳ್ಳು; ಸಿಕ್ಕುಸಿಕ್ಕಾಗು; ಜಟಿಲಗೊಳ್ಳು; ಕಗ್ಗಂಟಾಗು.
  2. ಎಳೆಎಳೆಯಾಗಿ ಕಿತ್ತುಹೋಗು.
See also 1ravel
2ravel ರ್ಯಾವ(ವ್‍)ಲ್‍
ನಾಮವಾಚಕ
  1. (ದಾರ ಮೊದಲಾದವುಗಳ) ತೊಡಕು; ಸಿಕ್ಕು; ಗೋಜು; ಗಂಟು.
  2. (ಅಂಚು ಯಾ ಸೆರಗು ಹಳೆಯದಾಗಿ) ಕಿತ್ತು ಬಂದ ಎಳೆ.
  3. (ಸಮಸ್ಯೆ ಮೊದಲಾದವುಗಳ) ತೊಡಕು; ಜಟಿಲತೆ; ಗೋಜಲು.