See also 2rave  3rave
1rave ರೇವ್‍
ನಾಮವಾಚಕ
  1. ಹಳಿ; ಗಾಡಿಯ ಕಂಬಿ.
  2. (ಬಹುವಚನದಲ್ಲಿ) ಗಾಡಿಯ ಎರಡೂ ಪಕ್ಕದ ಕಟಕಟೆ, ತಡಿಕೆ; ಗಾಡಿಯಲ್ಲಿ ಹಿಡಿಸುವ ಸ್ಥಳಾವಕಾಶವನ್ನು ಹೆಚ್ಚಿಸಲು ಅದರ ಎರಡೂಬದಿಗಳಿಗೆ ಕಟ್ಟಿದ, ಹಾಕಿ ತೆಗೆಯುವಂತಿರುವ, ತಡೆ ಚೌಕಟ್ಟು.
See also 1rave  3rave
2rave ರೇವ್‍
ಸಕರ್ಮಕ ಕ್ರಿಯಾಪದ
  1. (ಅತ್ಯುತ್ಸಾಹದಿಂದ) ಹೇಳಿಕೊ.
  2. (ದುಃಖ ಮೊದಲಾದವನ್ನು ಕೂಗುತ್ತ ಕಿರಿಚುತ್ತಾ) ಅಬ್ಬರದಿಂದ ತೋಡಿಕೊ: raved their grief ಅವರ ದುಃಖವನ್ನು ಅಬ್ಬರದಿಂದ ತೋಡಿಕೊಂಡರು.
  3. ಕಿರಿಚಾಡಿ, ಕೂಗಾಡಿ ಒಂದು ಸ್ಥಿತಿಗೆ ತಂದುಕೊ: raved himself hoarse ಗಂಟಲೊಡೆಯುವಂತೆ ಕಿರಿಚಾಡಿದ.
ಅಕರ್ಮಕ ಕ್ರಿಯಾಪದ
  1. (ಹುಚ್ಚು ಯಾ ಸನ್ನಿ ಹಿಡಿದಂತೆ) ಹುಚ್ಚುಹುಚ್ಚಾಗಿ – ಮಾತಾನಾಡು, ಆರ್ಭಟಿಸು, ಬಡಬಡಿಸು, ಕೂಗಾಡು: he raved about ಅವನು ಹುಚ್ಚುಹುಚ್ಚಾಗಿ ಕೂಗಾಡುತ್ತಿದ್ದ.
  2. (ಸಮುದ್ರ, ಗಾಳಿ ಮೊದಲಾದವುಗಳ ವಿಷಯದಲ್ಲಿ) ಮೊರೆ; ಭೋರ್ಗರೆ; ಆರ್ಭಟಿಸು; ಅಬ್ಬರಿಸು.
  3. (ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ) ಮಿತಿಮೀರಿದ ಮಮತೆ, ಮೆಚ್ಚಿಕೆಗಳಿಂದ – ಹೂಗಳು ಶ್ಲಾಘಿಸು, ಕೊಂಡಾಡು.
  4. ಅಡ್ಡಿ ಆತಂಕವಿಲ್ಲದೆ ಖುಷಿಪಡು; ಸ್ವೇಚ್ಛೆಯಾದ ಸುಖ ಅನುಭವಿಸು (ಮುಖ್ಯವಾಗಿ rave it up) ( ಸಕರ್ಮಕ ಕ್ರಿಯಾಪದ ಸಹ).
ಪದಗುಚ್ಛ

raving mad

  1. ಹುಚ್ಚುಹುಚ್ಚಾಗಿ ಕೂಗಾಡುತ್ತಾ.
  2. ಹುಚ್ಚುಹಿಡಿದು.
See also 1rave  2rave
3rave ರೇವ್‍
ನಾಮವಾಚಕ
  1. (ಗಾಳಿ ಮೊದಲಾದವುಗಳ) ಮೊರೆತ; ಅಬ್ಬರ; ಜೋರು; ಭೋರ್ಗರೆತ; ಆರ್ಭಟ; ಗರ್ಜನ.
  2. (ಸಾಮಾನ್ಯವಾಗಿ ವಿಶೇಷಣವಾಗಿ ಪ್ರಯೋಗ) (ಆಡುಮಾತು) (ಚಲನಚಿತ್ರ, ನಾಟಕ ಮೊದಲಾದವುಗಳ) ಅತಿಪ್ರಶಂಸೆ; ಅತಿ ಹೊಗಳಿಕೆ; ಅತಿರೇಕದ ಕೊಂಡಾಟ: a rave review ಅತಿ ಪ್ರಶಂಸೆಯ ವಿಮರ್ಶೆ.
  3. (ಅಶಿಷ್ಟ) (ವ್ಯಕ್ತಿಯ ಮೇಲಣ) ಹುಚ್ಚುಹುಚ್ಚು ಪ್ರೀತಿ; ವ್ಯಾಮೋಹ.
  4. = rave-up.