rationalize ರ್ಯಾಷನಲೈಸ್‍ಕೆ -೧
ಸಕರ್ಮಕ ಕ್ರಿಯಾಪದ
  1. ತರ್ಕಬದ್ಧವಾಗಿಸು; ಸಯುಕ್ತಿಕವಾಗಿಸು; ತರ್ಕ ನಿಯಮಾನುಸಾರಿಯಾಗಿ, ಸಮಂಜಸವಾಗಿರುವಂತೆ ಮಾಡು: to rationalize English spelling ಇಂಗ್ಲಿಷ್‍ ಕಾಗುಣಿತವನ್ನು ತರ್ಕಬದ್ಧವಾಗಿ ಮಾಡಲು.
  2. (ಮನಶ್ಶಾಸ್ತ್ರ) ಆಪಾತ(ರಮಣೀಯ) ತರ್ಕಮಾಡು; (ತನ್ನ ಕಾರ್ಯ, ಭಾವ, ಭಾವನೆಗಳಿಗೆ ನಿಜವಾಗಿ ಮೂಲವಾಗಿರುವ ಅಪ್ರಜ್ಞಾಸ್ತರದ ಕಾರಣಗಳನ್ನು ಗಮನಿಸದೆ) ಸಂಭಾವ್ಯವಾಗಿ ತೋರುವ, ತರ್ಕಬದ್ಧವಾಗಿ ಕಾಣಿಸುವ ವಿವರಣೆ ನೀಡು; ತರ್ಕಾಭಾಸದ ವಿವರಣೆ ಕೊಡು.
  3. (ಒಂದರಿಂದ) ತರ್ಕವಿರುದ್ಧಾಂಶಗಳನ್ನು ತೆಗೆದುಹಾಕು; ಪ್ರಕೃತ್ಯತೀತ ವಿವರಣೆಗಳಿಗೆ ಬದಲಾಗಿ ಪ್ರಕೃತಿಸಿದ್ಧ, ಪ್ರಕೃತ್ಯನುಸಾರಿ ವಿವರಣೆಗಳನ್ನು ಒದಗಿಸು.
  4. (ದುಡಿಮೆ, ಕಾಲ, ಸಾಮಗ್ರಿ ಮೊದಲಾದವುಗಳ ದುರ್ವ್ಯಯ ತಪ್ಪಿಸಿ ಸಾಮರ್ಥ್ಯ ಹೆಚ್ಚಿಸಲು ಪ್ರಕ್ರಿಯೆ, ಉದ್ಯಮ, ವ್ಯಾಪಾರ, ಮೊದಲಾದವುಗಳನ್ನು) ಪುನರ್ವ್ಯವಸ್ಥೆಗೊಳಿಸು; ಸುಧಾರಣೆ ತರು; ಸುಧಾರಿಸು.
  5. ತಾರ್ಕಿಕವಾಗಿ (ವಿಷಯವನ್ನು) ವಿವರಿಸು ಯಾ ತಾರ್ಕಿಕ ವಿವರಣೆಯ ಮೂಲಕ ತೇಲಿಸಿಬಿಡು.
ಅಕರ್ಮಕ ಕ್ರಿಯಾಪದ
  1. ತರ್ಕಬದ್ಧವಾಗಿ ಯೋಚಿಸು; ಸಯುಕ್ತಿಕವಾಗಿ ಚಿಂತಿಸು.
  2. (ವರ್ತನೆಗೆ ಯಾ ಭಾವನೆಗೆ) ಸಂಭಾವ್ಯವಾದ (ಆದರೆ ನಿಜವಾಗಿರದ) ವಿವರಣೆಯನ್ನು, ತರ್ಕಾಭಾಸದ ಕಾರಣವನ್ನು – ನೀಡು, ಒದಗಿಸು.