rationalization ರ್ಯಾಷನಲೈಸೆಷನ್‍
ನಾಮವಾಚಕ
  1. ತರ್ಕಬದ್ಧವಾಗಿಸುವಿಕೆ.
  2. (ಮನಶ್ಶಾಸ್ತ್ರ) ಆಪಾತ (ರಮಣೀಯ) ತರ್ಕ; ತರ್ಕಾಭಾಸ; ಸಂಭಾವ್ಯ ತರ್ಕ; ಸಂಭಾವ್ಯವಾಗಿರುವಂಥ, ತರ್ಕಬದ್ಧವಾಗಿ ಕಾಣುವ (ಆದರೆ ವಸ್ತುಸ್ಥಿತಿ ಹಾಗಿರದ) ವಿವರಣೆ, ಕಾರಣ ಯಾ ಅದನ್ನು ನೀಡುವಿಕೆ, ಕಲ್ಪಿಸುವಿಕೆ.
  3. (ವಿಷಯವನ್ನು) ತಾರ್ಕಿಕ ವಿವರಣೆಯ ಮೂಲಕ ತೇಲಿಸಿಬಿಡುವಿಕೆ.
  4. (ಪ್ರಕ್ರಿಯೆ, ಉದ್ಯಮ ಮೊದಲಾದವುಗಳ) ಪುನರ್ವ್ಯವಸ್ಥೆ; ಸುಧಾರಣೆ; ದುರ್ವ್ಯಯ ಕಡಿಮೆಮಾಡಿ ಸಾಮರ್ಥ್ಯ ಹೆಚ್ಚಿಸುವಿಕೆ.