rather ರಾದರ್‍
ಕ್ರಿಯಾವಿಶೇಷಣ
  1. -ಕ್ಕಿಂತ ಹೆಚ್ಚಾಗಿ; -ಕ್ಕಿಂತ ಹೆಚ್ಚು ನಿಜವಾಗಿ, ನಿಷ್ಕೃಷ್ಟವಾಗಿ, ಸಂಭವನೀಯವಾಗಿ, ಯುಕ್ತವಾಗಿ, ಖಚಿತವಾಗಿ ಉಪಾದೇಯವಾಗಿ, ಅಪೇಕ್ಷಿತವಾಗಿ, ವರಣೀಯವಾಗಿ, ಆಯ್ಕೆಗೆ ತಕ್ಕುದಾಗಿ: it is rather good than bad ಒಟ್ಟಿನ ಮೇಲೆ ಅದು ಕೆಟ್ಟದ್ದು ಎನ್ನುವುದಕ್ಕಿಂತ ಒಳ್ಳೆಯದು ಎನ್ನುವುದೇ ಯುಕ್ತ. it is derived rather from imagination than reason ವಿಚಾರಕ್ಕಿಂತ ಹೆಚ್ಚಾಗಿ ಅದು ಕಲ್ಪನೆಯಿಂದ ಹುಟ್ಟಿದ್ದು. orderliness is not the result, it is rather the cause of law ವ್ಯವಸ್ಥಿತ ಸ್ಥಿತಿಯು ಶಾಸನದ ಪರಿಣಾಮವಲ್ಲ, ಅದಕ್ಕಿಂತ ಹೆಚ್ಚಾಗಿ ಅದು ಶಾಸನದ ಮೂಲ. late last night, or rather early this morning ಕಳೆದ ರಾತ್ರಿ ಸರಿ ಹೊತ್ತಿನಲ್ಲಿ, ಅಥವಾ ಇನ್ನೂ ಖಚಿತವಾಗಿ, ಇಂದು ಮುಂಜಾನೆ ಬಹುಮುಂಚೆ.
  2. ಸ್ವಲ್ಪಮಟ್ಟಿಗೆ; ಅಲ್ಪಸ್ವಲ್ಪ; ಕೊಂಚಮಟ್ಟಿಗೆ: I rather think you know him ಆತನನ್ನು ನೀವು ಬಲ್ಲಿರೆಂದು (ಕೊಂಚಮಟ್ಟಿಗೆ) ನನಗೆ ಅನ್ನಿಸುತ್ತದೆ. he was rather a failure ಅವನು ಸ್ವಲ್ಪಮಟ್ಟಿಗೆ ಅಯಶಸ್ವಿಯೆಂದೇ ಹೇಳಬೇಕು. it was rather good ಅಲ್ಪಸ್ವಲ್ಪ ಚೆನ್ನಾಗಿತ್ತು.
  3. -ಕ್ಕಿಂತ ಮುಂಚೆ, ಮೊದಲು; -ಕ್ಕಿಂತ ಮೇಲೆಂದು, ಒಳ್ಳೆಯದೆಂದು, ಲೇಸೆಂದು, ತಕ್ಕುದೆಂದು, ಹಿತವಾದದ್ದೆಂದು, ಉಚಿತವೆಂದು, ಉತ್ತಮವೆಂದು ಭಾವಿಸಿ: he would much rather die than refuse ಇಲ್ಲ ಎನ್ನುವುದಕ್ಕಿಂತ ಮೊದಲು ಅವನು ಸತ್ತರೂ ಸತ್ತಾನು. use soft water rather than hard ಉಪ್ಪು ಯಾ ಚೌಳು ನೀರಿಗಿಂತ ಲವಣರಹಿತ ನೀರನ್ನು ಬಳಸು, ಅದು ಮೇಲು. the desire to seem clever rather than honest ಪ್ರಾಮಾಣಿಕನೆನಿಸಿಕೊಳ್ಳುವುದಕ್ಕಿಂತ ಜಾಣನೆನಿಸಿಕೊಳ್ಳಬೇಕೆಂಬ ಬಯಕೆ. I would resign, rather than stifle my conscience ನನ್ನ ಅಂತರ್ವಾಣಿಯ ಕೊರಳನ್ನು ಹಿಚುಕುವುದಕ್ಕಿಂತ ರಾಜೀನಾಮೆ ಕೊಟ್ಟೇನು. I had rather err with Plato than be right with you ನಿನ್ನೊಡನೆ ಸೇರಿ ಸರಿಯೆನಿಸಿಕೊಳ್ಳುವುದಕ್ಕಿಂತ ಪ್ಲೇಟೋವಿನೊಡನೆ ಸೇರಿ ತಪ್ಪೆನಿಸಿಕೊಳ್ಳುವುದೇ ನನಗೆ ಲೇಸು.
  4. (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ಉತ್ತರ ಹೇಳುವಲ್ಲಿ) ಓಹೋ, ಖಂಡಿತ; ಸಂದೇಹವೇ ಇಲ್ಲದೆ; ನಿಸ್ಸಂಶಯವಾಗಿ; ಅನುಮಾನವೇ ಇಲ್ಲದೆ: have you been here before? Rather! ಇದಕ್ಕೆ ಮುಂಚೆ ಇಲ್ಲಿಗೆ ಎಂದಾದರೂ ಬಂದಿದ್ದಿರಾ? ಓಹೋ, ಖಂಡಿತ!
ಪದಗುಚ್ಛ
  1. had rather ಹೆಚ್ಚು ಇಷ್ಟದಿಂದ, ಸಂತೋಷವಾಗಿ.
  2. the rather that ಏಕೆಂದರೆ; ಅದಕ್ಕಿಂತ ಹೆಚ್ಚಾಗಿ.