See also 2ransom
1ransom ರ್ಯಾನ್‍ಸಮ್‍
ನಾಮವಾಚಕ
  1. ಯುದ್ಧಕೈದಿಯ
    1. (ಬೆಲೆ ಸ್ವೀಕರಿಸಿ ಕೈದಿಯ) ಬಿಡುಗಡೆ.
    2. ವಿಮೋಚನಾ ಶುಲ್ಕ; ಬಿಡುಗಡೆಗಾಗಿ ತೆತ್ತ ಬೆಲೆ; ಬಿಡುಗಡೆಯ ತೆರ, ಬೆಲೆ, ಮೌಲ್ಯ.
  2. (ವ್ಯಕ್ತಿಗೆ ಯಾ ಸಂಸ್ಥೆಗೆ, ಯಾವುದೇ ಹಕ್ಕು, ವಿನಾಯಿತಿ, ಮೊದಲಾದವುಗಳನ್ನು ಕೊಡುವ ಸಲುವಾಗಿ ಬಲಾತ್ಕಾರದಿಂದ ವಸೂಲು ಮಾಡುವ) ತೆರ; ಸುಲಿಗೆ: graduated income tax and death duties paid by the rich are really a fair ransom ಶ್ರೀಮಂತರು ತೆರುವ ಶ್ರೇಣೀಕೃತ ಆದಾಯತೆರಿಗೆ ಹಾಗೂ ಮರಣ ತೆರಿಗೆಗಳು ನಿಜಕ್ಕೂ ಒಂದು ನ್ಯಾಯವಾದ ತೆರ.
ಪದಗುಚ್ಛ
  1. hold one to ransom
    1. ಬಿಡುಗಡೆಯ ತೆರವನ್ನು ತೆರುವವರೆಗೂ ಯಾರನ್ನೇ ಆಗಲಿ ಹಿಡಿದಿಟ್ಟಿರು, ಬಂಧಿಸಿಟ್ಟಿರು.
    2. ಬೆದರಿಕೆ ಹಾಕಿ ತಾನು ಬೇಡಿದ್ದನ್ನು ಕೊಡುವಂತೆ ಆಗ್ರಹಿಸು, ಬಲಾತ್ಕಾರಮಾಡು, ಒತ್ತಾಯ ಹೇರು.
  2. worth a king’s ransom ಅಪಾರ ಬೆಲೆಯ; ರಾಜಮೌಲ್ಯದ.
See also 1ransom
2ransom ರ್ಯಾನ್‍ಸಮ್‍
ಸಕರ್ಮಕ ಕ್ರಿಯಾಪದ
  1. (ಬಿಡುಗಡೆ ಬೆಲೆಯನ್ನು ತೆತ್ತು) ಕೈದಿಯನ್ನು ಬಿಡಿಸು, ಬಿಡಿಸಿಕೊ.
  2. (ಬಿಡುಗಡೆ ತೆರ ತೆತ್ತು) ಬಿಡುಗಡೆಯನ್ನು ಕೊಂಡುಕೊ.
    1. (ಪರಿಹಾರಧನ ತೆತ್ತು) ಪಾಪವಿಮೋಚನೆ ಪಡೆ.
    2. (ಪಾಪಕ್ಕೆ) ಪ್ರಾಯಶ್ಚಿತ್ತ ಮಾಡಿಕೊ.
  3. ಬಿಡುಗಡೆ ತೆರವನ್ನು ತೆರುವವರೆಗೂ ಯಾರನ್ನೇ ಆಗಲಿ ಹಿಡಿದಿಟ್ಟಿರು.
  4. (ಬಿಡುಗಡೆ ತೆರ ತೆತ್ತ ಕೈದಿಯನ್ನು) ಬಿಡುಗಡೆ ಮಾಡು.
  5. (ಯಾರನ್ನೇ ಆಗಲಿ ಬಂಧಿಸಿಟ್ಟು) ಬಿಡುಗಡೆ ಬೆಲೆಯನ್ನು ಸುಲಿ, ವಸೂಲು ಮಾಡು.