ranger ರೇಂಜರ್‍
ನಾಮವಾಚಕ
  1. ರೇಂಜರು; ವನಪಾಲಕ; ಕಾಡುರಕ್ಷಕ; ಕಾಡನ್ನು ಒಂದು ತಾಕಿನಲ್ಲಿ ಸುತ್ತಾಡುತ್ತ ಅದರ ಕಾವಲು ನೋಡಿಕೊಳ್ಳುವ ಅಧಿಕಾರಿ.
  2. (ಬ್ರಿಟಿಷ್‍ ಪ್ರಯೋಗ) ರಾಷ್ಟ್ರೋದ್ಯಾನಪಾಲಕ ಯಾ ರಾಜೋದ್ಯಾನಪಾಲಕ; ರಾಜನಿಗೆ ಯಾ ಸರ್ಕಾರಕ್ಕೆ ಸೇರಿದ ಉದ್ಯಾನಗಳನ್ನು ಕಾಯುವ ಅಧಿಕಾರಿ.
  3. (ಅಮೆರಿಕನ್‍ ಪ್ರಯೋಗ) ರೇಂಜರು; ಅಮೆರಿಕದ ಸಂಯುಕ್ತ ಸಂಸ್ಥಾನದ ಕಮ್ಯಾಂಡೊ ದಳದವನು.
  4. (ಬಹುವಚನದಲ್ಲಿ) ರೇಂಜರ್‍ ಪಡೆ; ರಾವುತ ಇಲ್ಲವೆ ಬೇರಾವುದೇ ಶಸ್ತ್ರಸಜ್ಜಿತ ದಳ.
  5. ರೇಂಜರು; ಗರ್ಲ್‍ಗೈಡ್‍ ದಳದ ಹಿರಿಯ ಅಧಿಕಾರಿಣಿ.