random ರ್ಯಾಂಡಮ್‍
ಗುಣವಾಚಕ
  1. ಗೊತ್ತುಗುರಿಯಿಲ್ಲದೆ ಮಾಡಿದ; ಮನಬಂದಂತೆ ಮಾಡಿದ; ಸಿಕ್ಕಾಬಟ್ಟೆಯ: random selection ಮನಬಂದಂತೆ ಮಾಡಿದ ಆಯ್ಕೆ.
  2. (ಕಲ್ಲು ಕಟ್ಟಡದ ವಿಷಯದಲ್ಲಿ) ಅಡ್ಡಾದಿಡ್ಡಿ ಕಲ್ಲುಗಳಿಂದ ಕಟ್ಟಿದ; ಗಾತ್ರ, ಆಕಾರದಲ್ಲಿ ಯದ್ವಾತದ್ವಾ ಇರುವ ಕಲ್ಲುಗಳಿಂದ ಕಟ್ಟಿದ.
  3. (ಸಂಖ್ಯಾಶಾಸ್ತ್ರ) ಯಾದೃಚ್ಛಿಕ;
    1. ಸಮಾನಾವಕಾಶದ; ಪ್ರತಿಯೊಂದು ಬಾಬಿಗೂ ಸಮಾನ ಅವಕಾಶಗಳಿರುವ.
    2. ಯಾದೃಚ್ಛಿಕ ವಿಧಾನದಿಂದ ಕೊಟ್ಟ, ದತ್ತವಾದ.
ಪದಗುಚ್ಛ

at random ಗೊತ್ತುಗುರಿಯಿಲ್ಲದೆ; ಮನಬಂದಂತೆ; ಸ್ವೇಚ್ಛೆಯಾಗಿ; ಸಿಕ್ಕಾಬಟ್ಟೆ.