rampant ರ್ಯಾಂಪಂಟ್‍
ಗುಣವಾಚಕ
  1. (ವಂಶಲಾಂಛನಗಳಲ್ಲಿ, ಪ್ರಾಣಿಗಳ, ಮುಖ್ಯವಾಗಿ ಸಿಂಹದ, ವಿಷಯದಲ್ಲಿ) ಹಿಂಗಾಲುಗಳ ಮೇಲೇರಿ ನಿಂತಿರುವ; ಮುಂಗಾಲ ಪಂಜಗಳನ್ನೆತ್ತಿ, ಬಾಲನಿಮಿರಿಸಿಕೊಂಡು, ಹಿಂಗಾಲ ಮೇಲೇರಿ, ಮೇಲೆ ಬೀಳುವ ಭಂಗಿಯಲ್ಲಿ ನಿಂತಿರುವ. Figure: rampant-1
  2. (ಅಭಿಪ್ರಾಯ ಯಾ ಕಾರ್ಯದಲ್ಲಿ) ಅತಿರೇಕದ; ಉಗ್ರ; ಆಕ್ರಮಣಶೀಲ; ಯಾವ ತಡೆಯೂ ಇಲ್ಲದ: a rampant theorist ಅತಿರೇಕದ ಸಿದ್ಧಾಂತಿ.
  3. ತಡೆಯೇ ಇಲ್ಲದೆ ಹರಡುತ್ತಿರುವ; ತಡೆಬಡೆಯಿಲ್ಲದೆ ಹಬ್ಬುತ್ತಿರುವ: popery is among us ಪೋಪನ ಪ್ರಭಾವ ನಮ್ಮಲ್ಲಿ ತಡೆಯೇ ಇಲ್ಲದೆ ಹರಡುತ್ತಿದೆ. rampant violence ತಡೆಯೇ ಇಲ್ಲದೆ ಹರಡುತ್ತಿರುವ ಹಿಂಸೆ.
  4. (ಸಸ್ಯಗಳ ವಿಷಯದಲ್ಲಿ) ಹುಚ್ಚಾಬಟ್ಟೆ ಹಬ್ಬುವ, ಬೆಳೆಯುವ: a rich soil makes nasturtiums too rampant ಫಲವತ್ತಾದ ನೆಲವು ಕಾಡುಸಾಸಿವೆ ಗಿಡಗಳನ್ನು ಹುಚ್ಚಾಬಟ್ಟೆ ಹಬ್ಬಿಸುತ್ತದೆ.
  5. (ಕಮಾನು ಮೊದಲಾದವುಗಳ ವಿಷಯದಲ್ಲಿ) ಏರುವೋರೆಯ; ಒಂದು ಒದೆಗಂಬ ಇನ್ನೊಂದಕ್ಕಿಂತ ಎತ್ತರವಾಗಿರುವ; ಹೆಚ್ಚು ಕಡಿಮೆ ಎತ್ತರದ ಒದೆಗಂಬಗಳುಳ್ಳ.
ಪದಗುಚ್ಛ
  1. lion rampant (ವಂಶಲಾಂಛನಗಳಲ್ಲಿ) ಹಿಂಗಾಲ ಮೇಲೇರಿ ಎಗರಿಬೀಳುವ ಭಂಗಿಯಲ್ಲಿ ನಿಂತಿರುವ ಸಿಂಹ.
  2. the snob rampant ನಿಮಿರಿನಿಂತು ಬಡಾಯಿ ಮೆರೆಯುವ ಪ್ರತಿಷ್ಠಾಪೂಜಕ.