rambling ರ್ಯಾಂಬ್ಲಿಂಗ್‍
ಗುಣವಾಚಕ
  1. ಸುತ್ತಾಡುತ್ತಿರುವ; ಅಲೆದಾಡುತ್ತಿರುವ.
  2. ಅಸಂಬದ್ಧ; ವಿಷಯಾಂತರ ಪ್ರಸ್ತಾಪದ; ವಿಷಯದಿಂದ ವಿಷಯಕ್ಕೆ ಹಾರುವ; ಶಾಖಾಚಂಕ್ರಮಣದ; ಒಂದಕ್ಕೊಂದಕ್ಕೆ ಸಂಬಂಧವಿಲ್ಲದಂತೆ ಮಾತನಾಡುವ ಯಾ ಬರೆಯುವ.
  3. (ಬಳ್ಳಿಗಳ ವಿಷಯದಲ್ಲಿ) ಹರಿಯುವ; ಹಬ್ಬುವ; ಅಡರುವ.
  4. (ಮನೆ, ಬೀದಿ ಮೊದಲಾದವುಗಳ ವಿಷಯದಲ್ಲಿ) ಕ್ರಮರಹಿತ; ವ್ಯವಸ್ಥಾರಹಿತ; ಸಿಕ್ಕಾಬಟ್ಟೆ ಕಟ್ಟಿರುವ ಯಾ ನಿರ್ಮಿಸಿರುವ; ಯಾವ ಕ್ರಮವೂ ಇಲ್ಲದೆ ಯದ್ವಾತದ್ವಾ ಹಬ್ಬಿರುವ.