See also 2rail  3rail  4rail
1rail ರೇಲ್‍
ನಾಮವಾಚಕ
  1. (ಸಾಮಾನುಗಳನ್ನು ತೂಗು ಹಾಕಲು, ಕಟಕಟೆಯ ತಲೆಯ ಮೇಲೆ ಹಿಡಿಗಂಬಿಯಾಗಿ ಹಾಕಲು, ಬೇಲಿಕಟ್ಟಲು, ಹೊರಗಿನದರ ಸಂಸರ್ಗದಿಂದ ಬೇರ್ಪಡಿಸಲು, ಯಾರೇ ಆಗಲಿ ಯಾವುದೇ ಆಗಲಿ ಮಗುಚಿ ಬೀಳದಂತೆ ತಡೆಯಲು ಹಾಕುವ, ಮರದ ಯಾ ಲೋಹದ) ಅಡ್ಡಕಂಬಿ ಯಾ ಇಳಿಜಾರುಗಂಬಿ, ಯಾ ಇಂತಹ ಕಂಬಿಗಳ ಸಾಲು.
  2. (ಪುಟೀಪುಕದ ಮೊದಲಾದವುಗಳ ಮೇಲಿನ ಯಾವುದೇ) ಅಡ್ಡಪಟ್ಟಿ.
  3. ರೈಲುಕಂಬಿ ಯಾ ರೈಲುಕಂಬಿಗಳ ಸಾಲು.
  4. (ಅನೇಕವೇಳೆ ವಿಶೇಷಣವಾಗಿ ಪ್ರಯೋಗ) ರೈಲುಮಾರ್ಗ: send it by rail ರೈಲುಮಾರ್ಗದಲ್ಲಿ ಕಳುಹಿಸು. rail fares ರೈಲುದರಗಳು.
ಪದಗುಚ್ಛ
  1. at railway speed ರೈಲಿನ ವೇಗದಲ್ಲಿ; ಬಹಳ ವೇಗವಾಗಿ.
  2. by rail ರೈಲುಮಾರ್ಗದ ಮೂಲಕ; ರೈಲಿನ ಮೂಲಕ.
  3. off the rails
    1. ಮಾರ್ಗ ಬಿಟ್ಟ; ನಡೆ ತಪ್ಪಿದ.
    2. ಅವ್ಯವಸ್ಥಿತವಾದ; ಕ್ರಮತಪ್ಪಿದ.
  4. over the rails ಹಡಗಿನ ಪಕ್ಕದ ಮೇಲಿಂದ, ಆಚೆಗೆ.
See also 1rail  3rail  4rail
2rail ರೇಲ್‍
ಸಕರ್ಮಕ ಕ್ರಿಯಾಪದ
  1. (ಒಂದು ಸ್ಥಳವನ್ನು) ಕಂಬಿಗಳಿಂದ ಸುತ್ತುಗಟ್ಟು.
  2. (ಬೆಂಚು ಮೊದಲಾದವಕ್ಕೆ) ಅಡ್ಡಪಟ್ಟಿ ಹಾಕು; ಕಂಬಿಕಟ್ಟು.
  3. (ರೈಲುಮಾರ್ಗಕ್ಕೆ) ರೈಲುಕಂಬಿಗಳನ್ನು ಹಾಸು, ಹಾಕು.
  4. (ಸರಕುಗಳನ್ನು) ರೈಲಿನಲ್ಲಿ ಸಾಗಿಸು.
ಅಕರ್ಮಕ ಕ್ರಿಯಾಪದ

ರೈಲಿನಲ್ಲಿ ಪ್ರಯಾಣಮಾಡು.

See also 1rail  2rail  4rail
3rail ರೇಲ್‍
ಅಕರ್ಮಕ ಕ್ರಿಯಾಪದ

ಬಯ್ಯು; ನಿಂದಿಸು; ದೂಷಿಸು; ತೆಗಳು.

See also 1rail  2rail  3rail
4rail ರೇಲ್‍
ನಾಮವಾಚಕ

ರಾಲಿಡೇ ವಂಶದ, ಕೊಕ್ಕರೆ ಜಾತಿಯ ಹಲವು ಬಗೆಯ ಹಕ್ಕಿ; ರೇಲ್‍ ಹಕ್ಕಿ.

ಪದಗುಚ್ಛ
  1. land rail ನೆಲವಾಸಿ ರೇಲ್‍ ಹಕ್ಕಿ.
  2. water-rail ಜಲವಾಸಿ ರೇಲ್‍ ಹಕ್ಕಿ.