ragged ರ್ಯಾಗಿಡ್‍
ಗುಣವಾಚಕ
  1. ಚಿಂದಿಚಿಂದಿಯಾದ; ಜೂಲುಜೂಲಾದ: in ragged clothes (ವ್ಯಕ್ತಿಗಳ ವಿಷಯದಲ್ಲಿ) ಜೂಲುಜೂಲಾದ ಬಟ್ಟೆಯಲ್ಲಿ.
  2. ಜೂಲುಗೂದಲಿನ; ದೊರಗು, ಒರಟು ಕೂದಲಿನ; ಜೊಂಪೆಜೊಂಪೆಯಾಗಿ ಜೋಲುತ್ತಿರುವ ಕೂದಲುಳ್ಳ.
  3. ಕೋಚು ಕೋಚಾದ ಮೈ ಯಾ ರೂಪುರೇಖೆಯುಳ್ಳ; ಗರಗಸದಂತೆ ಮೊನೆಮೊನೆಯಾದ; ಕ್ರಕಚಾಗ್ರವುಳ್ಳ.
  4. ಏರುಪೇರುಗಳಿಂದ ಕೂಡಿದ; ದೋಷಯುತವಾದ; ಕುಂದುಕೊರತೆಗಳಿಂದ ಕೂಡಿದ.
  5. ನಯನಾಜೂಕಿಲ್ಲದ; ಏಕರೀತಿಯಾಗಿರದ; ವಿಷಮ; ಅಡ್ಡಾದಿಡ್ಡಿ: ragged rhymes ವಿಷಮಪ್ರಾಸಗಳು.
  6. ಸುಸ್ತಾದ; ದಣಿದ.