See also 2radical
1radical ರ್ಯಾಡಿಕಲ್‍
ಗುಣವಾಚಕ
  1. ಬೇರಿನ; ಮೂಲದ.
  2. ಸ್ವರೂಪಭೂತ; ಮೂಲಸ್ವರೂಪದ; ಮೂಲಭೂತ: a radical error ಮೂಲಭೂತ ದೋಷ.
  3. ಆಧಾರಭೂತ; ಆದ್ಯ; ಪ್ರಾಥಮಿಕ; ಪ್ರಾರಂಭಿಕ; ಮೂಲ: the radical idea or principles of a system ಒಂದು ವ್ಯವಸ್ಥೆಯ ಆಧಾರಭೂತ, ಮೂಲ ಭಾವನೆ ಯಾ ತತ್ತ್ವಗಳು.
  4. ತಲಸ್ಪರ್ಶಿ; ಆಮೂಲಾಗ್ರ: radical reform ಆಮೂಲಾಗ್ರ ಸುಧಾರಣೆ.
  5. (ರಾಜಕಾರಣಿಗಳ ವಿಷಯದಲ್ಲಿ)
    1. ತೀವ್ರ ಸುಧಾರಣಾವಾದಿಯಾದ; ಆಮೂಲಾಗ್ರ ಸುಧಾರಣೆಯನ್ನು ಎತ್ತಿಹಿಡಿಯುವ.
    2. (ಚರಿತ್ರೆ) ಲಿಬರಲ್‍ ಪಕ್ಷದ ತೀವ್ರಗಾಮಿ ಗುಂಪಿನ.
    3. (ಆಡಳಿತವು ಕೈಗೊಳ್ಳುವ ಕಾರ್ಯಗಳ ವಿಷಯದಲ್ಲಿ) ತೀವ್ರ ಸುಧಾರಣಾವಾದಿಗಳು ಮಂಡಿಸಿದ ಯಾ ತೀವ್ರ ಸುಧಾರಣಾ ತತ್ತ್ವಗಳಿಗೆ ಅನುಸಾರವಾದ.
  6. (ಗಣಿತ) ಕರಣಿ; ಕರಣಿಗೆ ಸಂಬಂಧಿಸಿದ; ವರ್ಗಮೂಲ, ಘನಮೂಲ ಮೊದಲಾದವಕ್ಕೆ ಸಂಬಂಧಿಸಿದ.
  7. (ಭಾಷಾಶಾಸ್ತ್ರ) ಪದಗಳ ಮೂಲರೂಪದ:
    1. (ನಾಮಪದದ ವಿಷಯದಲ್ಲಿ) ಪ್ರಕೃತಿಯ; ಪ್ರಾತಿಪದಿಕದ.
    2. (ಕ್ರಿಯಾಪದದ ವಿಷಯದಲ್ಲಿ) ಧಾತುವಿನ; ಧಾತುರೂಪದ.
  8. (ಸಂಗೀತ) ಒಂದು ಸ್ವರಮೇಳದ ಯಾ ಸ್ವರಸಂಘಾತದ ಮೂಲಕ್ಕೆ ಸೇರಿದ.
  9. (ಸಸ್ಯವಿಜ್ಞಾನ) ಮೂಲಜ; ಬೇರಿನಿಂದ ನೇರವಾಗಿ ಉದ್ಭವಿಸುವ.
  10. (ಅಮೆರಿಕನ್‍ ಪ್ರಯೋಗ) (ಚರಿತ್ರೆ) ಅಂತರ್ಯುದ್ಧದ ಸಮಯದಲ್ಲಿ ದಕ್ಷಿಣ ರಾಜ್ಯಗಳ ವಿರುದ್ಧ ತೀವ್ರಕ್ರಮ ಬಯಸುವ.
  11. (ಶಸ್ತ್ರವೈದ್ಯ) ರೋಗಮೂಲಹಾರಿ; ರೋಗದ ಮೂಲವನ್ನು ಯಾ ರೋಗಗ್ರಸ್ತ ಊತಕವನ್ನೆಲ್ಲ ತೆಗೆದುಹಾಕುವಂತೆ ರೂಪಿಸಿದ.
ಪದಗುಚ್ಛ

radical heat, humour, etc., (ಮಧ್ಯಯುಗದ ತತ್ತ್ವಶಾಸ್ತ್ರ) ಜೀವದ ಸಾರಸ್ವರೂಪವೆಂದು ಭಾವಿಸಲಾಗಿದ್ದ ಉಷ್ಣ, ಪಿತ್ತ, ಮೊದಲಾದ ದ್ರವ್ಯ.

See also 1radical
2radical ರ್ಯಾಡಿಕಲ್‍
ನಾಮವಾಚಕ
  1. (ಭಾಷಾಶಾಸ್ತ್ರ) ಮೂಲಪದ; ಪದದ ಮೂಲರೂಪ; (ನಾಮಪದದ) ಪ್ರಕೃತಿ ಯಾ ಪ್ರಾತಿಪದಿಕ, (ಕ್ರಿಯಾಪದದ) ಧಾತು.
  2. ಮೂಲತತ್ತ್ವ.
  3. (ಗಣಿತ) ಕರಣಿ:
    1. ವರ್ಗಮೂಲ, ಘನಮೂಲ, ಮೊದಲಾದ ರೂಪದಲ್ಲಿ ವ್ಯಕ್ತಪಡಿಸಿದ ಪರಿಮಾಣ.
    2. ಕರಣಿ ಚಿಹ್ನೆ.
  4. (ರಸಾಯನವಿಜ್ಞಾನ) ರ್ಯಾಡಿಕಲ್‍:
    1. ಆಣುವೊಂದರ ಭಾಗವಾಗಿದ್ದು, ಸಾಮಾನ್ಯ ರಾಸಾಯನಿಕ ಬದಲಾವಣೆಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಅಣುವಿನಿಂದ ಅಣುವಿಗೆ ವರ್ಗಾವಣೆಯಾಗುವ ಪರಮಾಣು ಯಾ ಪರಮಾಣುಗುಚ್ಛ.
    2. ಮುಕ್ತವಾಗಿ ಗಮನಾರ್ಹ ಕಾಲ ಅಸ್ತಿತ್ವದಲ್ಲಿರುವ ಅಂಥ ರ್ಯಾಡಿಕಲ್‍.
  5. (ರಾಜಕಾರಣ) ತೀವ್ರಗಾಮಿ; ತೀವ್ರಗಾಮಿ ಭಾವನೆಗಳನ್ನುಳ್ಳವನು ಯಾ ತೀವ್ರಗಾಮಿ ಪಕ್ಷದವನು.