radiator ರೇಡಿಏಟರ್‍
ನಾಮವಾಚಕ
    1. ಪ್ರಸಾರಕ; ಪ್ರಸಾರಮಾಡುವ ವ್ಯಕ್ತಿ ಯಾ ವಸ್ತು.
    2. ವಿಕಿರಣಕಾರಿ.
  1. (ಕಾದ ಗಾಳಿ, ನೀರು, ಮೊದಲಾದವುಗಳಿಂದ ಕಾವು ಪಡೆದು, ಕೊಠಡಿ ಮೊದಲಾದವುಗಳಿಗೆ ಶಾಖ ಬೀರುವ) ಶಾಖಪ್ರಸಾರಕ.
  2. (ಸಾಮಾನ್ಯವಾಗಿ ಒಯ್ಯಲು ಸುಲಭವಾದ) ಎಣ್ಣೆಯ ಯಾ ವಿದ್ಯುತ್ತಿನ ಒಲೆ, ಸ್ಟೌವ್‍.
  3. (ಮೋಟಾರು ವಾಹನದಲ್ಲಿ) ರೇಡಿಯೇಟರು; ಎಂಜಿನನ್ನು ತಂಪಿಸುವ ಸಲಕರಣೆ.