See also 2radiant
1radiant ರೇಡಿಅಂಟ್‍
ಗುಣವಾಚಕ
  1. ಕಿರಣಗಳನ್ನು (ಹೊರ)ಸೂಸುವ, ಪ್ರಸರಿಸುವ; ತೇಜೋರಾಶಿಯನ್ನು ಹರಡುವ; ಕಾಂತಿಯನ್ನು ಬೀರುವ; ಪ್ರಭಾಮಯವಾದ.
  2. (ಕಣ್ಣಿನ ಯಾ ರೂಪಲಾವಣ್ಯದ ವಿಷಯದಲ್ಲಿ) (ಆನಂದ, ಆಶೆ ಯಾ ಪ್ರೇಮದಿಂದ) ಪ್ರಕಾಶಮಾನವಾದ; ಕಾಂತಿಮಯವಾದ; ತೇಜಃಪುಂಜವಾದ.
  3. (ಬೆಳಕಿನ ವಿಷಯದಲ್ಲಿ) ಕಿರಣಗಳಾಗಿ ಹರಡುವ, ಪ್ರಸರಿಸುವ.
  4. (ಚೆಲುವಿನ ವಿಷಯದಲ್ಲಿ) ಉಜ್ವಲ; ದೇದೀಪ್ಯಮಾನ; ತೇಜೋಮಯ; ಕಣ್ಣನ್ನು ಕೋರೈಸುವ.
  5. ತ್ರಿಜ್ಯಾಕಾರವಾಗಿ, ತ್ರಿಜ್ಯಗಳಂತೆ – ವರ್ತಿಸುವ ಯಾ ವಿಸ್ತರಿಸುವ.
See also 1radiant
2radiant ರೇಡಿಅಂಟ್‍
ನಾಮವಾಚಕ
  1. ಬೆಳಕು ಯಾ ಉಷ್ಣವು ವಿಕಿರಣವಾಗುವ ಬಿಂದು ಯಾ ವಸ್ತು; ವಿಕಿರಣ ಕೆಂದ್ರ.
  2. (ಖಗೋಳ ವಿಜ್ಞಾನ) = radiant point.