See also 2radial
1radial ರೇಡಿಅಲ್‍
ಗುಣವಾಚಕ
  1. ಕಿರಣಗಳ ಯಾ ಕಿರಣಗಳಲ್ಲಿಯ.
  2. ರೇಡಿಯಲ್‍:
    1. ಕಿರಣಗಳಂತೆ ಯಾ ತ್ರಿಜ್ಯಗಳಂತೆ – ಜೋಡಿಸಿದ.
    2. ತ್ರಿಜ್ಯದ ಸ್ಥಾನ ಯಾ ಮುಖವುಳ್ಳ; ತ್ರಿಜ್ಯದ ದಿಕ್ಕಿನಲ್ಲಿರುವ: radial axle (ರೈಲು, ಟ್ರ್ಯಾಂ, ಮೊದಲಾದ ಮಾರ್ಗದ ಒಂದು ಬಾಗಿನಲ್ಲಿ ರೈಲುಗಾಡಿ ಮೊದಲಾದ ವಾಹನವು ತಿರುಗುವಾಗ) ಬಾಗಿನ ವರ್ತುಲಕ್ಕೆ ತ್ರಿಜ್ಯವಾಗಿ ವರ್ತಿಸುವ ಆ ವಾಹನದ ಗಾಲಿಯ ಅಚ್ಚು.
  3. ಅರಗಳುಳ್ಳ; ಅರೆಕಾಲುಗಳುಳ್ಳ.
  4. ಕೇಂದ್ರದಿಂದ ಹೊರಟು ಹರಡುತ್ತಾ ಹೋಗುವ ರೇಖೆಗಳುಳ್ಳ; ಕೇಂದ್ರಾಪಸರಣ ರೇಖೆಗಳುಳ್ಳ.
  5. ಕೇಂದ್ರಾಪಸರಣ ಗತಿಯ ಯಾ ವರ್ತನೆಯ; ಕೇಂದ್ರದಿಂದ ಹೊರಟು ಅಪಸರಣ ಹೊಂದಿ ನಾನಾ ದಿಕ್ಕಿನಲ್ಲಿ ಹರಿಯುವ ರೇಖೆಗಳಲ್ಲಿ ಚಲಿಸುವ ಯಾ ವರ್ತಿಸುವ.
  6. (ಅಂಗರಚನಾಶಾಸ್ತ್ರ) ಮುಂದೋಳಿನ ‘ರೇಡಿಯಸ್‍’ಮೂಳೆಯ.
  7. (ವಾಹನದ ಟೈರಿನ ವಿಷಯದಲ್ಲಿ) ತ್ರಿಜ್ಯೀಯ; ರೇಡಿಯಲ್‍; ರಚನಾ ಸ್ತರಗಳನ್ನು ಪರಿಧಿಗೆ ಲಂಭವಾಗಿ, ತ್ರಿಜ್ಯೀಯವಾಗಿ ಅಳವಡಿಸಲಾಗಿರುವ.
See also 1radial
2radial ರೇಡಿಅಲ್‍
ನಾಮವಾಚಕ
  1. = radial nerve.
  2. = radial artery.
  3. ರೇಡಿಯಲ್‍ ಟೈರು.