racy ರೇಸಿ
ಗುಣವಾಚಕ
( ತರರೂಪ racier, ತಮರೂಪ raciest).
  1. ಸ್ವಜಾತಿಲಕ್ಷಣಸಂಪನ್ನ; ತನ್ನ ಜಾತಿಯ ಲಕ್ಷಣಗಳನ್ನು ಹೇರಳವಾಗಿ ಉಳ್ಳ.
  2. (ಮುಖ್ಯವಾಗಿ ರುಚಿಯ ವಿಷಯದಲ್ಲಿ) ಸ್ವವೈಶಿಷ್ಟ್ಯವುಳ್ಳ; ತನ್ನದೇ ಆದ ವಿಶಿಷ್ಟ ರುಚಿಯುಳ್ಳ: of racy flavour ತನ್ನದೇ ಆದ ರುಚಿಯುಳ್ಳ.
  3. ಸಹಜಗುಣವಿಶಿಷ್ಟ; ಮೂಲದ ಗುಣಗಳನ್ನು, ಹುಟ್ಟುಗುಣದ ಬಲವನ್ನು, ಉಳಿಸಿಕೊಂಡಿರುವ: racy of the soil ಸಹಜಗುಣಗಳಿಂದ ಕೂಡಿದ; ಸಹಜ ಸರಳತೆ, ಓಜಸ್ಸು, ಜೀವಂತಿಕೆ, ತೀಕ್ಷ್ಣತೆಗಳುಳ್ಳ.
  4. (ಶೈಲಿಯಲ್ಲಿ) ಸ್ವಾರಸ್ಯವೂ ವೀರ್ಯವತ್ತೂ ಆದ.