See also 2rack  3rack  4rack  5rack  6rack  7rack  8rack  9rack  10rack  11rack  12rack
1rack ರ್ಯಾಕ್‍
ನಾಮವಾಚಕ

ಚೆದುರು ಮೋಡಗಳು; ಬಿರುಗಾಳಿಯು ರಭಸದಿಂದ ಹೊಡೆದುಕೊಂಡು ಹೋಗುತ್ತಿರುವ, ಚೆಲ್ಲಾಪಿಲ್ಲಿಯಾದ ಮೇಘ ರಾಶಿಗಳು.

See also 1rack  3rack  4rack  5rack  6rack  7rack  8rack  9rack  10rack  11rack  12rack
2rack ರ್ಯಾಕ್‍
ಅಕರ್ಮಕ ಕ್ರಿಯಾಪದ

(ಮೋಡಗಳ ವಿಷಯದಲ್ಲಿ, ಗಾಳಿಯ ರಭಸದಿಂದ) ಹೊಡೆದುಕೊಂಡು ಹೋಗು.

See also 1rack  2rack  4rack  5rack  6rack  7rack  8rack  9rack  10rack  11rack  12rack
3rack ರ್ಯಾಕ್‍
ನಾಮವಾಚಕ
  1. ಮೇವು ತುಂಬಿಡಲು ಮಾಡಿದ, ಮರದ ಯಾ ಲೋಹದ ಕಂಬಿಗಳ ಚೌಕಟ್ಟು; ಮೇವು ಬಡು, ಪತ್ತಿಗೆ; ಗೋದಣಿಗೆ.
  2. (ಸಾಮಾನುಗಳು, ಪುಸ್ತಕಗಳು ಮೊದಲಾದವುಗಳನ್ನಿಡಲು ಮಾಡಿದ ಅಡ್ಡಪಟ್ಟಿಗಳು, ಗೂಟಗಳು ಯಾ ಗೂಡುಗಳ ) ಬಡು; ಪತ್ತಿಗೆ; ರ್ಯಾಕು.
  3. ಹಲ್ಲುಗಾಲಿಗೆ ಯಾ ತಿರುವು ಸುತ್ತಿಗೆ ಹೊಂದಿಕೆಯಾಗುವಂತೆ ಮಾಡಿದ ಹಲ್ಲುಗಳನ್ನಾಗಲಿ ಕಚ್ಚುಗಳನ್ನಾಗಲಿ ಉಳ್ಳ ಸರಳು ಯಾ (ರೈಲು)ಕಂಬಿ. Figure: rack(3)
ಪದಗುಚ್ಛ

hat-rack ಹ್ಯಾಟುಗಳ ಪತ್ತಿಗೆ.

See also 1rack  2rack  3rack  5rack  6rack  7rack  8rack  9rack  10rack  11rack  12rack
4rack ರ್ಯಾಕ್‍
ಸಕರ್ಮಕ ಕ್ರಿಯಾಪದ
  1. (ಮೇವು ಕಟ್ಟಿನಲ್ಲಿ ಹುಲ್ಲು ತುಂಬಿ) ಕುದುರೆಯನ್ನು ಮೇಯಿಸು; ಕುದುರೆಗೆ ಮೇವಿಡು.
  2. (ಕುದುರೆ ಮೊದಲಾದವನ್ನು) ಮೇವು ಕಟ್ಟಿಗೆ ಕಟ್ಟು.
  3. ಪತ್ತಿಗೆಯ, ಬಡುವಿನ ಮೇಲೆ ಯಾ ಒಳಗೆ (ಯಾವುದೇ ಸಾಮಾನನ್ನು) ಇಡು.
ಅಕರ್ಮಕ ಕ್ರಿಯಾಪದ

ಲಾಯದ ಮೇವುಕಟ್ಟನ್ನು (ಒಣ) ಹುಲ್ಲಿನಿಂದ ತುಂಬು, ಭರ್ತಿಮಾಡು.

See also 1rack  2rack  3rack  4rack  6rack  7rack  8rack  9rack  10rack  11rack  12rack
5rack ರ್ಯಾಕ್‍
ಸಕರ್ಮಕ ಕ್ರಿಯಾಪದ
  1. (ಚರಿತ್ರೆ) (ಮುಖ್ಯವಾಗಿ ಚಿತ್ರಹಿಂಸೆಗಾಗಿ ನಿರ್ಮಿಸಿದ ಚೌಕಟ್ಟು ಯಾ ಹಾಸಿಗೆಗೆ ಕಟ್ಟಿ, ವ್ಯಕ್ತಿಯ) ಕೀಲುಗಳನ್ನು ಹಿಗ್ಗಲಿಸು.
  2. (ರೋಗದ ಯಾ ದೈಹಿಕ ಹಾಗೂ ಮಾನಸಿಕ ಯಾತನೆಯ ವಿಷಯದಲ್ಲಿ) ಚಿತ್ರಹಿಂಸೆ ಕೊಡು, ಮಾಡು: a racking headache ಚಿತ್ರಹಿಂಸೆ ಕೊಡುವ ತಲೆಶೂಲೆ.
    1. ಚಿತ್ರಹಿಂಸೆಯಾಗುವಂತೆ ಕುಲುಕಿಬಿಡು, ಅಲ್ಲಾಡಿಸಿಬಿಡು.
    2. ಕಾಲುಕೀಲುಗಳನ್ನೆಲ್ಲ ಎಳೆದು ಹಿಂಸಿಸು; ಹಿಗ್ಗಾಮುಗ್ಗಾ ಎಳೆದು ಯಾತನೆಯುಂಟುಮಾಡು: cough that seemed to rack his whole body ಅವನ ಮೈಯನ್ನೆಲ್ಲ ಅಲ್ಲಾಡಿಸಬಿಡುವಂತಿದ್ದ ಕೆಮ್ಮು.
    3. ಅತಿಯಾದ ಶ್ರಮ ಕೊಡು; ವೇದನೆಯಾಗುವಷ್ಟು ಶ್ರಮಪಡಿಸು: racked his brains for a plan ವುದಾದರೂ ಒಂದು ಉಪಾಯ ಹವಣಿಸಲು ತನ್ನ ಮಿದುಳಿಗೆ ಆದಷ್ಟೂ ಶ್ರಮಕೊಟ್ಟ, ತಲೆತುರುಚಿಕೊಂಡ.
    1. (ಸಾಧ್ಯವಾದಷ್ಟೂ) ಅತಿಯಾದ ಕಂದಾಯವನ್ನು ಯಾ ಮೊಬಲಗನ್ನು ಕೀಳು, ಸುಲಿದುಕೊ, ವಸೂಲು ಮಾಡು.
    2. ಅತಿ ಕಂದಾಯ ವಸೂಲು ಮಾಡಿ ರೈತರನ್ನು ಯಾ ಗುತ್ತಿಗೆದಾರನನ್ನು, ಅತಿ ಬಾಡಿಗೆಯಿಂದ ಬಾಡಿಗೆದಾರರನ್ನು – ಹಿಂಸಿಸು.
    3. ಅತಿಯಾಗಿ ಬೆಳೆ ತೆಗೆದು ಜಮೀನನ್ನು ನಿಸ್ಸಾರಗೊಳಿಸು, ಸತ್ತ್ವಹೀನವಾಗಿಸು.
See also 1rack  2rack  3rack  4rack  5rack  7rack  8rack  9rack  10rack  11rack  12rack
6rack ರ್ಯಾಕ್‍
ನಾಮವಾಚಕ

(ಚರಿತ್ರೆ) ಚಿತ್ರಹಿಂಸೆಯ ಹಾಸಿಗೆ; ಚಿತ್ರಹಿಂಸೆಗೆ ಒಳಪಡಿಸಿದವನನ್ನು ಅಂಗಾತನಾಗಿ ಮಲಗಿಸಿ ಅವನ ಕೈಕಾಲುಗಳನ್ನು ಎಳೆದು ಕಟ್ಟಿ ಎರಡು ತುದಿಗಳಲ್ಲೂ ಇರುವ ಭಾರವಾದ ಉರುಳೆಗಳನ್ನು ಹಿಂದಕ್ಕೂ ಮುಂದಕ್ಕೂ ಉರುಳಿಸಿ ಅವನ ಕೀಲುಗಳನ್ನೆಲ್ಲ ಹಿಗ್ಗಾಮುಗ್ಗಾ ಎಳೆದು ನರಕಯಾತನೆಗೆ ಗುರಿಮಾಡಲು ಬಳಸುತ್ತಿದ್ದ ಚೌಕಟ್ಟು.

ಪದಗುಚ್ಛ

on the rack

  1. ಚಿತ್ರಹಿಂಸೆಯ ಹಾಸಿಗೆಯ ಮೇಲೆ.
  2. ಘೋರ ಸಂಕಟಕ್ಕೆ ಸಿಕ್ಕಿ; ಚಿತ್ರಹಿಂಸೆಗೆ ಒಳಗಾಗಿ.
See also 1rack  2rack  3rack  4rack  5rack  6rack  8rack  9rack  10rack  11rack  12rack
7rack ರ್ಯಾಕ್‍
ನಾಮವಾಚಕ

= arrack (ಮುಖ್ಯವಾಗಿ rack punch ಎಂಬಲ್ಲಿ ಬಳಕೆ).

See also 1rack  2rack  3rack  4rack  5rack  6rack  7rack  9rack  10rack  11rack  12rack
8rack ರ್ಯಾಕ್‍
ನಾಮವಾಚಕ

ಕುಕ್ಕೋಟಕ್ಕೂ ಮಂದಗತಿಯ ನಾಗಾಲೋಟಕ್ಕೂ ಮಧ್ಯಸ್ಥ ವೇಗದ, ಕುದುರೆಯ ನಡಗೆ, ಗತಿ.

See also 1rack  2rack  3rack  4rack  5rack  6rack  7rack  8rack  10rack  11rack  12rack
9rack ರ್ಯಾಕ್‍
ಅಕರ್ಮಕ ಕ್ರಿಯಾಪದ

(ಕುದುರೆಯ ವಿಷಯದಲ್ಲಿ) ಕುಕ್ಕೋಟಕ್ಕೂ ಮಂದಗತಿಯ ನಾಗಾಲೋಟಕ್ಕೂ ಮಧ್ಯಸ್ಥ ವೇಗದಲ್ಲಿ ನಡೆ.