rabbi ರ್ಯಾಬೈ
ನಾಮವಾಚಕ
(ಬಹುವಚನ rabbis, (ಯೆಹೂದ್ಯ).)

ರ್ಯಾಬೈ:

  1. (ಮುಖ್ಯವಾಗಿ ದೀಕ್ಷೆ ಪಡೆದು ಧರ್ಮಶಾಸ್ತ್ರ ಮತ್ತು ಮತದ ಪ್ರಕ್ರಿಯೆಗಳು ಮೊದಲಾದವುಗಳಲ್ಲಿ ವ್ಯವಹರಿಸುವುದಕ್ಕೂ ಕೆಲವು ಸಂಸ್ಕಾರಗಳನ್ನು ನಡೆಸುವುದಕ್ಕೂ ಅಧಿಕಾರ ಪಡೆದ) ಯೆಹೂದ್ಯ ಧರ್ಮಶಾಸ್ತ್ರ – ವೇತ್ತ, ಪಂಡಿತ, ಬೋಧಕ.
  2. (ಸಂಬೋಧನೆಯಲ್ಲಿ ಯಾ ಹೆಸರಿನ ಹಿಂದೆ) ಯೆಹೂದ್ಯ ಧರ್ಮಶಾಸ್ತ್ರಜ್ಞನ ಬಿರುದಾಗಿ ಬಳಸುವ ಉಪಾಧಿ.
  3. ಯೆಹೂದ್ಯ ಧಾರ್ಮಿಕ ಮುಖಂಡನಾಗಿ ನೇಮಕಗೊಂಡವನು.
ಪದಗುಚ್ಛ

Chief Rabbi (ಬ್ರಿಟಿಷ್‍ ಪ್ರಯೋಗ) ಪ್ರಧಾನ ರ್ಯಾಬೈ; ಗ್ರೇಟ್‍ ಬ್ರಿಟನ್ನಿನಲ್ಲಿರುವ ಯುನೈಟೆಡ್‍ ಸಿನಗಾಗ್‍ ಎಂಬ ಸಂಯುಕ್ತ ಯೆಹೂದ್ಯ ಮಂಡಳಿಯ ಪ್ರಧಾನ ಗುರು.