See also 2quote
1quote ಕ್ವೋಟ್‍
ಸಕರ್ಮಕ ಕ್ರಿಯಾಪದ
  1. (ಒಂದು ಅಭಿಪ್ರಾಯ ಸಮರ್ಥನೆಗಾಗಿ, ಒಬ್ಬ ಗ್ರಂಥಕಾರನ, ಒಂದು ಗ್ರಂಥದ) ಆಧಾರ ಕೊಡು; ಉದಾಹರಣೆ ಕೊಡು.
  2. (ಒಬ್ಬನಿಂದ, ಒಂದು ಗ್ರಂಥದಿಂದ) ಹೇಳಿಕೆಯನ್ನು – ಉಲ್ಲೇಖಿಸು, ಉದ್ಧರಿಸು, ಓದು, ಬರೆ, ಎತ್ತಿ ಬರೆ, ಪುನರಾವರ್ತಿಸು: don’t quote me ನನ್ನ ಮಾತನ್ನು ಉದ್ಧರಿಸಬೇಡ; ನಾನು ಹೇಳಿದೆನೆಂದು ಹೇಳಬೇಡ.
  3. (ಅನೇಕ ವೇಳೆ ಕರ್ಮರಹಿತವಾಗಿ):
    1. (ಒಂದು ಗ್ರಂಥಭಾಗವನ್ನು ಸಾಮಾನ್ಯವಾಗಿ ಅದು ಉದ್ಧೃತವೆನ್ನುವುದನ್ನು ಸೂಚಿಸಿ) ಉದ್ಧರಿಸು ಯಾ ಉಲ್ಲೇಖಿಸು; ಎತ್ತಿ ಹೇಳು ಯಾ ಎತ್ತಿ ಬರೆ.
    2. (ಗ್ರಂಥ, ಗ್ರಂಥಕರ್ತ, ಮೊದಲಾದವರಿಂದ) ಉದ್ಧರಿಸು; ಉಲ್ಲೇಖಿಸು.
  4. (ಒಬ್ಬ ಗ್ರಂಥಕರ್ತ ಮೊದಲಾದವರನ್ನು ) ಆಧಾರವಾಗಿ, ಸಾಕ್ಷಿಯಾಗಿ – ಉದ್ಧರಿಸು, ಉಲ್ಲೇಖಿಸು.
  5. (ಪದಗಳನ್ನು, ಮಾತುಗಳನ್ನು) ಉದ್ಧರಣ ಚಿಹ್ನೆಗಳೊಳಗೆ ಸೇರಿಸು.
  6. (ಸರಕು, ಬಾಜಿ, ಮೊದಲಾದವುಗಳ) ಬೆಲೆಯನ್ನು ಹೇಳು, ನಮೂದಿಸು: quoted 200 to 1 ಒಂದಕ್ಕೆ ಇನ್ನೂರು ಬಾಜಿಯೆಂದು ಹೇಳಿದನು.
  7. (ಸ್ಟಾಕ್‍ ಎಕ್ಸ್‍ಚೇಂಜ್‍) ಒಂದರ ಬೆಲೆಯನ್ನು ನಿಯತವಾಗಿ ಪಟ್ಟಿಯಲ್ಲಿ ನಮೂದಿಸು.
  8. ( ಭಾವಸೂಚಕ ಅವ್ಯಯವಾಗಿ) (ಉಕ್ತಲೇಖನ, ಗಟ್ಟಿಯಾಗಿ ಓದುವಾಗ, ಮೊದಲಾದ ಕಡೆ) ಉದ್ಧರಣ ಚಿಹ್ನೆಗಳು ಆರಂಭವಾಗುತ್ತವೆಂಬುದನ್ನು ಸೂಚಿಸು, ಹೇಳು: he said, quote ‘I shall stay’.
See also 1quote
2quote ಕ್ವೋಟ್‍
ನಾಮವಾಚಕ

(ಆಡುಮಾತು)

  1. ಉದ್ಧರಣ; ಉಲ್ಲೇಖ; ಉದ್ಧೃತ ಭಾಗ.
  2. ನಮೂದಿಸಿದ ಬೆಲೆ.
  3. (ಸಾಮಾನ್ಯವಾಗಿ ಬಹುವಚನದಲ್ಲಿ ) ಉದ್ಧರಣ ಚಿಹ್ನೆಗಳು.