quotation ಕ್ವೋಟೇಷನ್‍
ನಾಮವಾಚಕ
  1. (ಗ್ರಂಥ ಮೊದಲಾದವುಗಳಿಂದ) ಉದ್ಧರಿಸುವುದು; ಎತ್ತಿ ಹೇಳುವುದು.
  2. ಉದ್ಧರಣ; ಉದ್ಧೃತ ಭಾಗ; ಉಲ್ಲೇಖನ; ಯಥೋಕ್ತ; ಎತ್ತಿ ಬರೆದದ್ದು.
  3. (ಸಂಗೀತ) ಒಂದು ಸಂಗೀತ ಕೃತಿಯಿಂದ ಇನ್ನೊಂದಕ್ಕೆ ತೆಗೆದುಕೊಂಡ ಕಿರುಭಾಗ ಯಾ ರಾಗ.
  4. ಬಂಡವಾಳ ವಿನಿಮಯ (ಸ್ಟಾಕ್‍ ಎಕ್ಸ್‍ಚೇಂಜ್‍) ಸ್ಟಾಕುಗಳ (ಬಂಡವಾಳ ಪತ್ರಗಳ) ಯಾ ಸರಕುಗಳ ಹಾಲಿ ಬೆಲೆ, ಸದ್ಯದ ಮೌಲ್ಯ.
  5. ಕಂಟ್ರಾಕ್ಟುದಾರನ ಅಂದಾಜು ವೆಚ್ಚ.