See also 2quiver  3quiver
1quiver ಕ್ವಿವರ್‍
ಅಕರ್ಮಕ ಕ್ರಿಯಾಪದ
  1. (ತುಸು ವೇಗವಾಗಿ) ಕಂಪಿಸು; ಅದಿರು; ನಡುಗು: quivering branches ಕಂಪಿಸುವ ರೆಂಬೆಗಳು.
  2. (ಮುಖ್ಯವಾಗಿ ಭಾವುಕತೆಯಿಂದ, ಚಳಿ ಮೊದಲಾದವುಗಳಿಂದ) ಕಂಪಿಸು; ಅದಿರು; ನಡುಗು: quiver with anger ಕೋಪದಿಂದ ನಡುಗು.
ಸಕರ್ಮಕ ಕ್ರಿಯಾಪದ

(ಹಕ್ಕಿಗಳ, ಮುಖ್ಯವಾಗಿ ಬಾನಾಡಿಯ ವಿಷಯದಲ್ಲಿ) ರೆಕ್ಕೆ ಅದುರಿಸು, ಅಲ್ಲಾಡಿಸು.

See also 1quiver  3quiver
2quiver ಕ್ವಿವರ್‍
ನಾಮವಾಚಕ

ಕಂಪನ; ಸ್ಪಂದನ; ಅದಿರುವಿಕೆ; ಅದಿರುವ, ಸ್ಪಂದಿಸುವ – ಚಲನೆ ಯಾ ದನಿ.

See also 1quiver  2quiver
3quiver ಕ್ವಿವರ್‍
ನಾಮವಾಚಕ

ಬತ್ತಳಿಕೆ; ತೂಣೀರ; ಮೂಡಿಗೆ; ಅಂಬು – ಚೀಲ, ಬುಟ್ಟಿ; ಬಾಣಗಳನ್ನಿಟ್ಟುಕೊಳ್ಳುವ ಕೋಶ, ಚೀಲ. Figure: quiver-3

ಪದಗುಚ್ಛ

have an arrow (or shaft) left in one’s quiver ನಿರುಪಾಯನಾಗದಿರು; ಸಾಧ\-ನೋಪಾಯವನ್ನು ಇಟ್ಟುಕೊಂಡಿರು.