See also 2quit
1quit ಕ್ವಿಟ್‍
ಕ್ರಿಯಾಪದ

(ವರ್ತಮಾನ ಕೃದಂತ quitting; ಭೂತರೂಪ ಮತ್ತು ಭೂತಕೃದಂತ quitted ಯಾ ಅದೇ).

ಸಕರ್ಮಕ ಕ್ರಿಯಾಪದ
  1. (ಕೆಲಸ ಮೊದಲಾದವನ್ನು) ತೊರೆ(ದು ಬಿಡು); ಬಿಟ್ಟುಬಿಡು; ತ್ಯಜಿಸು ( ಅಕರ್ಮಕ ಕ್ರಿಯಾಪದ ಸಹ).
  2. (ಅಮೆರಿಕನ್‍ ಪ್ರಯೋಗ) ನಿಲ್ಲಿಸು; ಬಿಡು: quit grumbling ಗೊಣಗುಟ್ಟುವುದನ್ನು ನಿಲ್ಲಿಸು.
  3. (ಒಂದು ಸ್ಥಳ, ವ್ಯಕ್ತಿ, ಮೊದಲಾದವರನ್ನು) ಬಿಟು ಹೊರಡು; ಬಿಟ್ಟು ಹೋಗು; ಅಗಲು: quitted Paris at midnight ಪ್ಯಾರಿಸ್‍ ನಗರವನ್ನು ನಡುರಾತ್ರಿಯಲ್ಲಿ ಬಿಟ್ಟು ಹೊರಟನು. quitted him in anger ಅವನನ್ನು ಕೋಪದಲ್ಲಿ ಅಗಲಿದನು.
  4. (ಆತ್ಮಾರ್ಥಕ) ನಡೆದುಕೊ; ವರ್ತಿಸು; ನಿಭಾಯಿಸು: quit oneself well ಚೆನ್ನಾಗಿ ನಡೆದುಕೊ.
ಅಕರ್ಮಕ ಕ್ರಿಯಾಪದ

(ಬಾಡಿಗೆದಾರನ ವಿಷಯದಲ್ಲಿ) (ವಾಸವಿದ್ದ ಮನೆಯನ್ನು) ಬಿಟ್ಟುಬಿಡು: give notice to quit ವಾಸವಿರುವ ಮನೆಯನ್ನು ಬಿಟ್ಟುಬಿಡು ಎಂದು ತಗಾದೆ ಕೊಡು.

ಪದಗುಚ್ಛ

quit hold of ಹಿಡಿತ ಸಡಿಲಿಸು; ಸಡಿಲ ಬಿಡು; ಸಡಿಲಗೊಳಿಸು; ಹಿಡಿತ ಕಳೆದುಕೊ.

See also 1quit
2quit ಕ್ವಿಟ್‍
ಆಖ್ಯಾತಕ ಗುಣವಾಚಕ

ಬಿಡುಗಡೆ ಹೊಂದಿದ; ಮುಕ್ತ(ನಾದ); ಪಾರಾದ; ವಿಮೋಚನೆ ಪಡೆದ: glad to be quit of the problem ತೊಂದರೆಯಿಂದ ಪಾರಾಗಿದ್ದಕ್ಕಾಗಿ ಸಂತೋಷ.