See also 2quip
1quip ಕ್ವಿಪ್‍
ನಾಮವಾಚಕ
  1. ವ್ಯಂಗ್ಯೋಕ್ತಿ; ವ್ಯಂಗ್ಯ ನುಡಿ; ಚುಚ್ಚುಮಾತು.
  2. ಚಮತ್ಕಾರದ ಮಾತಿನೇಟು;ಚುರುಕು ಮಾತು; ಚತುರ ನುಡಿ; ಮಾತಿನ ಚಮತ್ಕಾರ.
  3. ದ್ವಂದ್ವಾರ್ಥದ ಮಾತು; ಸಂದಿಗ್ಧ ನುಡಿ; ಹೊರಳು ಮಾತು; ಹದಿರು ನುಡಿ.
See also 1quip
2quip ಕ್ವಿಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ quipped; ವರ್ತಮಾನ ಪ್ರಥಮ ಪುರುಷ ಏಕವಚನ quipping).
  1. ವ್ಯಂಗ್ಯ ನುಡಿ ಆಡು; ಚುಚ್ಚುನುಡಿ ಆಡು.
  2. ಮಾತಿನ ಚಮತ್ಕಾರ ತೋರಿಸು; ಚತುರವಾಗಿ ನುಡಿ.
  3. ಹೊರಳು ಮಾತಾಡು; ಹದಿರು ನುಡಿ ಆಡು; ದ್ವಂದ್ವಾರ್ಥ ಬರುವಂತೆ ಮಾತಾಡು; ಸಂದಿಗ್ಧವಾಗಿ ನುಡಿ.