quintessence ಕ್ವಿಂಟೆಸನ್ಸ್‍
ನಾಮವಾಚಕ
  1. ಸಾರತತ್ತ್ವ; (ಯಾವುದೇ ವಸ್ತುವಿನ) ಶುದ್ಧ ಸಾರ; ಅತ್ಯಂತ ಸಾರವತ್ತಾದ ಭಾಗ: the quintessence of music is melody ನಾದ ಮಾಧುರ್ಯ ಸಂಗೀತದ ಅತ್ಯಂತ ಸಾರವತ್ತಾದ ಭಾಗ.
  2. ಯಾವುದೇ ಗುಣದ ಯಾ ವರ್ಗದ
    1. ಶುದ್ಧ ಪರಿಪೂರ್ಣ ರೂಪ.
    2. ಸಾರಭೂತವಾದ ಅಂಶ.
    3. ಸಾಕಾರ ರೂಪ; ಅವತಾರ; ಮೈದಳೆದ ಆಕಾರ: the quintessence of pride ಹೆಮ್ಮೆಯೇ ಮೈದಳೆದ ಆಕಾರ.
  3. (ಪ್ರಾಚೀನ ತತ್ತ್ವಶಾಸ್ತ್ರ) ಆಕಾಶಸ್ಥ ಕಾಯಗಳಲ್ಲಿಯೂ ಮಿಕ್ಕ ಎಲ್ಲ ವಸ್ತುಗಳಲ್ಲಿಯೂ ಅಂತರ್ಗತವಾಗಿರುವ (ಪೃಥ್ವಿ, ಅಪ್‍, ತೇಜಸ್ಸು, ವಾಯು ಎಂಬ ಚತುರ್ಭೂತಗಳಿಂದ ಬೇರೆಯಾದ) ಐದನೆಯ, ಪಂಚಮ ಭೂತ.