See also 2question
1question ಕ್ವೆಸ್ಚನ್‍
ನಾಮವಾಚಕ
  1. ಪ್ರಶ್ನೆ; ಮಾಹಿತಿ ಪಡೆಯಲು ಕೇಳಿದ ಪ್ರಶ್ನಾರ್ಥಕ ವಾಕ್ಯ: put question to (one) (ಒಬ್ಬನನ್ನು, ಒಂದರ ವಿಷಯವಾಗಿ) ಪ್ರಶ್ನಿಸು; ಪ್ರಶ್ನೆಮಾಡು; (ಒಬ್ಬನಿಗೆ) ಪ್ರಶ್ನೆ ಹಾಕು.
  2. (ಒಂದರ ಸತ್ಯತೆ, ವಿಶ್ವಾಸಾರ್ಹತೆ, ಔಚಿತ್ಯ, ಮೊದಲಾದವನ್ನು ಕುರಿತ) ಸಂದೇಹ ಯಾ ಆಕ್ಷೇಪಣೆ: he allowed it without question ಯಾವ ಆಕ್ಷೇಪಣೆಯನ್ನೂ ಎತ್ತದೆ ಅದಕ್ಕೆ ಅವಕಾಶ, ಅನುಮತಿ ಕೊಟ್ಟನು.
  3. ಸಂದೇಹವನ್ನು ಸೂಚಿಸುವುದು, ಎತ್ತುವುದು.
  4. ಪ್ರಶ್ನಾರ್ಹ ವಿಷಯ; ಚರ್ಚಿಸಬೇಕಾದ, ನಿರ್ಣಯಿಸಬೇಕಾದ, ಮತಕ್ಕೆ ಹಾಕಬೇಕಾದ – ವಿಷಯ.
  5. ಬಿಡಿಸಬೇಕಾದ – ಸಮಸ್ಯೆ, ಪ್ರಶ್ನೆ; ಪರಿಹರಿಸಬೇಕಾದ ತೊಡಕು; ಪರಿಹಾರ್ಯಸಮಸ್ಯೆ.
  6. (ಒಂದರ) ಸ್ಥಿತಿಗತಿಗಳನ್ನು, ವಿದ್ಯಮಾನಗಳನ್ನು ಕುರಿತ, ಅವಲಂಬಿಸಿದ – ಸಂಗತಿ, ವಿಷಯ, ವ್ಯವಹಾರ, ಪ್ರಶ್ನೆ: it’s a question of money ಅದು ಹಣದ ಪ್ರಶ್ನೆ.
ಪದಗುಚ್ಛ
  1. be a question of time ಬೇಗನೆ ಯಾ ಸ್ವಲ್ಪ ಕಾಲವಾದ ಮೇಲೆ ಆಗುವುದು ಖಚಿತ: success is merely a question of time ಜಯವೇನೋ ಖಚಿತ, ಬೇಗನೆ ಇಲ್ಲವೆ ಸ್ವಲ್ಪ ನಿಧಾನವಾಗಿ ಬರಬಹುದು.
  2. beyond all question ಖಂಡಿತವಾಗಿ; ನಿಸ್ಸಂದೇಹವಾಗಿ; ನಿಶ್ಚಯವಾಗಿ.
  3. come into question
    1. ಚರ್ಚೆಗೆ ಬರು.
    2. ನಿಜವಾಗಿ ಮುಖ್ಯವಾಗು; ವ್ಯಾವಹಾರಿಕವಾಗಿ ಮಹತ್ತ್ವಪೂರ್ಣವಾಗು.
  4. in question ಚರ್ಚಿಸುತ್ತಿರುವ ಯಾ ಉಲ್ಲೇಖಿಸಲಾದ: the person in question ಚರ್ಚಿಸುತ್ತಿರುವ, ಉಲ್ಲೇಖಿಸಲಾದ ವ್ಯಕ್ತಿ.
  5. is not the question ಅಸಂಗತ; ಅಪ್ರಸ್ತುತ.
  6. out of the question
    1. ಚರ್ಚಿಸಿ ಫಲವಿಲ್ಲದ; ಚರ್ಚೆ ಮಾಡಿ ಪ್ರಯೋಜನವಿಲ್ಲದ.
    2. ಚರ್ಚಿಸಲಾಗದ; ಅಸಾಧ್ಯವಾದ.
  7. put the question (ಸೂಚನೆಯನ್ನು ಅನುಮೋದಿಸುವವರೂ ವಿರೋಧಿಸುವವರೂ) ತಂತಮ್ಮ ಅಭಿಮತ ಕೊಡುವಂತೆ ಮಾಡು; ಸೂಚನೆಯನ್ನು ವೋಟಿಗೆ ಹಾಕು; (ಸಭೆ ಮೊದಲಾದವುಗಳಲ್ಲಿ ಮಂಡಿಸಿದ ಸೂಚನೆಗೆ) ಪರವಾಗಿರುವವರೆಷ್ಟು ಮಂದಿ, ವಿರೋಧವಾಗಿರುವವರೆಷ್ಟು ಮಂದಿ ಎಂಬುದನ್ನು ಮತ ತೆಗೆದುಕೊಂಡು ನಿರ್ಧರಿಸು.
  8. question mark ಪ್ರಶ್ನಾರ್ಥಕ ಚಿಹ್ನೆ(?).
See also 1question
2question ಕ್ವೆಸ್ಚನ್‍
ಸಕರ್ಮಕ ಕ್ರಿಯಾಪದ
  1. ಪ್ರಶ್ನಿಸು; ಪ್ರಶ್ನೆ ಮಾಡು; ಕೇಳು.
  2. (ಒಬ್ಬ ವ್ಯಕ್ತಿಯನ್ನು) ಪರೀಕ್ಷೆಗೆ ಒಳಪಡಿಸು.
  3. ಸಂದೇಹಪಡು; ಆಕ್ಷೇಪಣೆ ಎತ್ತು; ಪ್ರಶ್ನಿಸು.
  4. (ತಥ್ಯಾಂಶ, ಸತ್ಯಾಂಶ, ಮೊದಲಾದವುಗಳ) ಅಧ್ಯಯನದಿಂದ ಮಾಹಿತಿ ಪಡೆ.