See also 2quest
1quest ಕ್ವೆಸ್ಟ್‍
ನಾಮವಾಚಕ
  1. ಶೋಧನೆ; ಅನ್ವೇಷಣೆ; ಹುಡುಕಾಟ.
  2. (ಮುಖ್ಯವಾಗಿ ಮಧ್ಯಯುಗದ) (ವೀರನ) ಅನ್ವೇಷಣೆಯ – ಗುರಿ, ಉದ್ದೇಶ, ವಸ್ತು.
ಪದಗುಚ್ಛ

in quest of (ಒಂದನ್ನು) ಹುಡುಕುತ್ತಾ; ಅರಸುತ್ತ; ಅನ್ವೇಷಣೆ ಮಾಡುತ್ತಾ; (ಒಂದರ) ಶೋಧನೆ\-ಯಲ್ಲಿ: he went off in quest of food ಅವನು ಆಹಾರ ಹುಡುಕುತ್ತ ಹೊರಟು ಹೋದ.

See also 1quest
2quest ಕ್ವೆಸ್ಟ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) (ಒಂದಕ್ಕಾಗಿ) ಅರಸು; ಹುಡುಕು; ಅನ್ವೇಷಣೆ ಮಾಡು; ಶೋಧನೆ ಮಾಡು: a bee questing honeybuds ಜೇನುಹೂಗಳನ್ನು ಅರಸುತ್ತಿರುವ ದುಂಬಿ.

ಅಕರ್ಮಕ ಕ್ರಿಯಾಪದ
  1. (ಯಾವುದನ್ನೇ) ಹುಡುಕಿಕೊಂಡು ಹೋಗು: he is questing after a hidden treasure ಅವನು ಗುಪ್ತನಿಧಿಯೊಂದನ್ನು ಹುಡುಕಿಕೊಂಡು ಹೋಗುತ್ತಿದ್ದಾನೆ.
  2. (ನಾಯಿ ಮೊದಲಾದವುಗಳ ವಿಷಯದಲ್ಲಿ) ಬೇಟೆಗಾಗಿ ಹುಡುಕಾಡು.