quench ಕ್ವೆಂಚ್‍
ಸಕರ್ಮಕ ಕ್ರಿಯಾಪದ
  1. (ನೀರಡಿಕೆಯನ್ನು) ಕುಡಿದು ಹೋಗಲಾಡಿಸು; ದಾಹ ಶಮನಮಾಡು.
  2. (ಬೆಂಕಿ, ಬೆಳಕು, ಮೊದಲಾದವನ್ನು ) ಆರಿಸು; ನಂದಿಸು; ಅಳಿಸು.
  3. (ಶಾಖವನ್ನು, ಕಾದವಸ್ತುವನ್ನು) ಮುಖ್ಯವಾಗಿ ನೀರಿನಿಂದ – ತಣ್ಣಗಾಗಿಸು, ತಣ್ಣಗೆ ಮಾಡು.
  4. (ಮುಖ್ಯವಾಗಿ ಲೋಹವಿದ್ಯೆ) (ಕಾದ ಲೋಹವನ್ನು) ತಣ್ಣೀರು, ಗಾಳಿ, ಎಣ್ಣೆ, ಮೊದಲಾದವುಗಳಲ್ಲಿಟ್ಟು – ತಣ್ಣಗಾಗಿಸು, ತಣ್ಣಗೆ ಮಾಡು.
  5. (ಆಸೆ ಮೊದಲಾದವನ್ನು) ಅಡಗಿಸು; ಅದುಮಿಡು; ನಿಗ್ರಹಿಸು.
  6. (ಭೌತವಿಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್‍) (ತೂಗಾಟ, ದೀಪ್ತಿ, ಮೊದಲಾದವನ್ನು) (ನಿಷ್ಪರಿಣಾಮಕಾರಿ ವಿಧಾನದಿಂದ) ಅಡಗಿಸು; ತಡೆ.
  7. (ಅಶಿಷ್ಟ) (ಎದುರಾಳಿಯನ್ನು) ಬಾಯಿಮುಚ್ಚಿಸು; ಸೋಲೊಪ್ಪುವಂತೆ ಮಾಡು; ದಮನಮಾಡು.