See also 2queer  3queer
1queer ಕ್ವಿಅರ್‍
ಗುಣವಾಚಕ
  1. ವಿಚಿತ್ರ; ವಿಲಕ್ಷಣ; ವಕ್ರ: a queer way of talking ಮಾತನಾಡುವುದರಲ್ಲಿ ವಿಚಿತ್ರ ರೀತಿ.
  2. ಸಂಶಯಾಸ್ಪದ, ಸಂದೇಹಾಸ್ಪದ – ಶೀಲದ, ನಡತೆಯ.
  3. ತುಸು ಅಸ್ವಸ್ಥ; ತಲೆಸುತ್ತುವ; ಬವಳಿಬರುವ: to feel queer ತಲೆ ತಿರುಗುವಂತಾಗು.
  4. (ಹೀನಾರ್ಥಕ ಪ್ರಯೋಗ) (ಅಶಿಷ್ಟ) (ಮುಖ್ಯವಾಗಿ ಗಂಡಸಿನ ವಿಷಯದಲ್ಲಿ) ಸಲಿಂಗಕಾಮಿಯಾದ.
  5. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಕುಡಿದು ಅಮಲೇರಿದ.
ಪದಗುಚ್ಛ

in Queer Street (ಅಶಿಷ್ಟ)

  1. ಕಷ್ಟದಲ್ಲಿ; ತೊಂದರೆಯಲ್ಲಿ; ಫಜೀತಿಯಲ್ಲಿ
  2. ಸಾಲದಲ್ಲಿ, ತೊಂದರೆಯಲ್ಲಿ ಯಾ ಅಪಕೀರ್ತಿಯಲ್ಲಿ – ಸಿಕ್ಕಿಕೊಂಡು, ನರಳುತ್ತ.
See also 1queer  3queer
2queer ಕ್ವಿಅರ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ) ಕೆಡಿಸು; ಹಾಳುಮಾಡು.

ಪದಗುಚ್ಛ

queer a person’s pitch ಒಬ್ಬ ವ್ಯಕ್ತಿಯ ಯೋಜನೆಯನ್ನು (ಮುಖ್ಯವಾಗಿ ಗುಟ್ಟಾಗಿ ಯಾ ಕೇಡಿಗತನದಿಂದ) ಕುಲಗೆಡಿಸು, ಹಾಳುಗೆಡಹು.

See also 1queer  2queer
3queer ಕ್ವಿಅರ್‍
ನಾಮವಾಚಕ

(ಹೀನಾರ್ಥಕ ಪ್ರಯೋಗ) (ಅಶಿಷ್ಟ) ಸಲಿಂಗಕಾಮಿ.