1quarterly ಕ್ವಾರ್ಟರ್‍ಲಿ
ಗುಣವಾಚಕ
  1. ತ್ರೈಮಾಸಿಕ; ಮೂರು ತಿಂಗಳಿಗೊಮ್ಮೆ ಆಗುವ, ನಡೆಯುವ ಯಾ ಪ್ರಕಟವಾಗುವ.
  2. (ವಂಶಲಾಂಛನ ವಿದ್ಯೆ) (ಗುರಾಣಿಯ ವಿಷಯದಲ್ಲಿ) ನಾಲ್ಕು ಭಾಗಗಳಾಗಿ ವಿಭಾಗವಾಗಿರುವ.
2quarterly ಕ್ವಾರ್ಟರ್‍ಲಿ
ಕ್ರಿಯಾವಿಶೇಷಣ
  1. ತ್ರೈಮಾಸಿಕವಾಗಿ; ಮೂರು ತಿಂಗಳಿಗೊಮ್ಮೆ.
  2. (ವಂಶಲಾಂಛನ ವಿದ್ಯೆ) ವಂಶಲಾಂಛನ ಗುರಾಣಿಯ ನಾಲ್ಕು ಭಾಗಗಳಲ್ಲಿ ಯಾ ಮೂಲೆಮೂಲೆಯಾಗಿರುವ ಎರಡು ಭಾಗಗಳಲ್ಲಿ.
3quarterly ಕ್ವಾರ್ಟರ್‍ಲಿ
ನಾಮವಾಚಕ
(ಬಹುವಚನ quarterlies).

ತ್ರೈಮಾಸಿಕ; ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಪತ್ರಿಕೆ.