quartering ಕ್ವಾರ್ಟರಿಂಗ್‍
ನಾಮವಾಚಕ
  1. ವಿಭಜನ; ವಿಭಾಗಮಾಡುವಿಕೆ; (ಮುಖ್ಯವಾಗಿ) ನಾಲ್ಕು ಸಮ\-ಭಾಗಗಳಾಗಿ ಒಡೆಯುವುದು, ಸೀಳುವುದು, ವಿಭಾಗಿಸುವುದು.
  2. (ಬಹುವಚನದಲ್ಲಿ) (ವಂಶಲಾಂಛನ ವಿದ್ಯೆ) ಇತರ ಮನೆತನಗಳ ಹೆಣ್ಣುಗಳೊಡನೆ ಮದುವೆಯಾದುದನ್ನು ಸೂಚಿಸಲು ಗುರಾಣಿಯ ಮೇಲೆ ಕೆತ್ತುವ ಹೊಸ ವಂಶಲಾಂಛನಗಳು.
  3. ವಂಶಲಾಂಛನದ ಗುರಾಣಿಯ ನಾಲ್ಕನೆಯ ಭಾಗ, ಚತುರ್ಥಾಂಶ.
  4. (ಸೈನಿಕರು ಮೊದಲಾದವರಿಗೆ) ಬಿಡದಿ ಒದಗಿಸುವುದು, ಕಲ್ಪಿಸುವುದು.
  5. ಹಲಗೆ ಕೊಯ್ತ; ಉತ್ತಮ ಗುಣಮಟ್ಟದ ಹಾಸುಹಲಗೆಗಳಾಗಿ ಬಳಸಲು ದಿಮ್ಮಿಗಳನ್ನು ಉದ್ದುದ್ದನಾಗಿ ಕೊಯ್ಯುವುದು.