See also 2quarter
1quarter ಕ್ವಾರ್ಟರ್‍
ನಾಮವಾಚಕ
  1. ಕಾಲು (ಪಾಲು, ಭಾಗ); ಪಾದ; ಚತುರ್ಥಾಂಶ; ನಾಲ್ಕನೆಯ ಒಂದು ಭಾಗ; ಯಾವುದೇ ವಸ್ತುವು ವಿಭಾಗವಾಗಿರುವ ಯಾ ಅದನ್ನು ವಿಭಾಗಿಸಬಹುದಾದ ನಾಲ್ಕು ಸಮಭಾಗಗಳಲ್ಲೊಂದು: divide the apple into quarters ಸೇಬಿನ ಹಣ್ಣನ್ನು ನಾಲ್ಕು ಪಾಲುಗಳಾಗಿ ವಿಭಾಗಿಸು. second quarter of the century ಈ ಶತಮಾನದ ದ್ವಿತೀಯ ಪಾದ. quarter of an hour ಕಾಲು ಗಂಟೆ; 15 ನಿಮಿಷಗಳ ಅವಧಿ.
  2. (ಅಮೆರಿಕನ್‍ ಪ್ರಯೋಗ ಮತ್ತು ಕೆನಡಾ)
    1. ಕಾಲು ಡಾಲರ್‍; 25 ಸೆಂಟು.
    2. 25 ಸೆಂಟಿನ ನಾಣ್ಯ.
  3. ಪ್ರಾಣಿಯ ಯಾ ಪಕ್ಷಿಯ ಮೃತದೇಹವನ್ನು ಕಡಿದಾಗ ಬರುವ, ಪ್ರತಿಭಾಗದಲ್ಲೂ ಒಂದು ಕಾಲು ಅಥವಾ ಒಂದು ರೆಕ್ಕೆ ಇರುವಂಥ ನಾಲ್ಕು ಭಾಗಗಳಲ್ಲೊಂದು; ಕಾಲುದೇಹ.
  4. (ಚರಿತ್ರೆ) (ಬಹುವಚನದಲ್ಲಿ) ಕಾಲೊಡಲು; ಕಾಲುದೇಹ; ರಾಜದ್ರೋಹಿಯ ಯಾ ದೇಶದ್ರೋಹಿಯ ತಲೆ ಕಡಿದ ಮೇಲೆ ಅವನ ಮೈಯನ್ನು ಒಂದು ಕಾಲು ಅಥವಾ ಒಂದು ಕೈ ಸೇರಿದಂತೆ ತುಂಡರಿಸಿದ ನಾಲ್ಕು ಭಾಗಗಳಲ್ಲೊಂದು.
  5. (ಸಾಮಾನ್ಯವಾಗಿ ಬಹುವಚನದಲ್ಲಿ) (ಬದುಕಿರುವ ಪ್ರಾಣಿಯ ಯಾ ಮನುಷ್ಯನ) ರೊಂಡಿ; ಸೊಂಟದ ಹಿಂಬದಿ.
  6. ಹಡಗಿನ ಹಿಂಬದಿ; ಹಡಗಿನ ಪಾರ್ಶ್ವದಲ್ಲಿ ಪ್ರಧಾನ ಸರಪಣಿಗಳಿಗೆ ಹಿಂದಿರುವ ಭಾಗ.
  7. (ವಂಶಲಾಂಛನ ವಿದ್ಯೆ) (ಮೇಲ್ಮೈಯನ್ನು ನಾಲ್ಕಾಗಿ ವಿಭಾಗಿಸಿದ) ಗುರಾಣಿಯ ಚತುರ್ಥ ಭಾಗ (dexter chief, sinister chief, dexter base, sinister base ಎಂಬವು ಈ ನಾಲ್ಕು ಭಾಗಗಳ ಹೆಸರುಗಳು).
  8. (ವಂಶಲಾಂಛನ ವಿದ್ಯೆ) ಗುರಾಣಿಯ ಪ್ರಧಾನ ಚತುರ್ಥಾಂಶದಲ್ಲಿ (ಎಂದರೆ ನಡುವಣ ಚತುರ್ಥಾಂಶದಲ್ಲಿ) ಕೆತ್ತಿರುವ ಲಾಂಛನ.
  9. (ಬ್ರಿಟಿಷ್‍ ಪ್ರಯೋಗ) (ಧಾನ್ಯದ ವಿಷಯದಲ್ಲಿ) 8 ಬುಷೆಲ್‍ಗಳ ಅಳತೆ.
  10. (ಬ್ರಿಟಿಷ್‍ ಪ್ರಯೋಗ) ಕ್ವಾರ್ಟರ್‍; ಹಂಡ್ರೆಡ್‍ವೇಟ್‍ ತೂಕದ ಕಾಲುಭಾಗ; 28 ಪೌಂಡು ತೂಕ (ಯಾ ಅಮೆರಿಕನ್‍ ಪ್ರಯೋಗ 25 ಪೌಂಡು).
  11. ಕಾಲು ಮಾರು (ಉದ್ದ ಯಾ ಆಳ).
  12. ವರ್ಷದ – ಕಾಲು ಭಾಗ, ಪಾದ; ತ್ರಿಮಾಸ; ಮಾಸತ್ರಯ.
  13. ತ್ರೈಮಾಸಿಕ; ಮೂರುತಿಂಗಳ ಕೊನೆಯಲ್ಲಿ ಯಾರಿಗೇ ಆಗಲಿ ಕೊಡುವ ವೇತನ, ಜೀವನಾಂಶ, ಮೊದಲಾದವು.
  14. ಟರ್ಮು; ಶಾಲಾ ವರ್ಷದ (ಅಮೆರಿಕನ್‍ ಪ್ರಯೋಗದಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವರ್ಷದ) ಒಂದು ಭಾಗ.
    1. ವಾರ; ಚಾಂದ್ರಮಾನ ಮಾಸದ ಕಾಲುಭಾಗ.
    2. ಚಾಂದ್ರಮಾನ ತಿಂಗಳಿನ ಪ್ರಥಮ ದ್ವಿತೀಯ ಪಾದಗಳಿಗೆ (first quarter) ಯಾ ತೀಯ ಚತುರ್ಥ ಪಾದಗಳಿಗೆ (last quarter) ನಡುವೆ ಚಂದ್ರನಿರುವ ಸ್ಥಾನ.
  15. ಕಾಲು ಗಂಟೆ; ಗಡಿಯಾರದಲ್ಲಿ ಯಾವುದೇ ಗಂಟೆಗೆ ಮುಂಚೆ ಯಾ ತರುವಾಯ 15 ನಿಮಿಷಗಳು: quarter to six ಆರಕ್ಕೆ ಕಾಲು ಗಂಟೆ ಇದೆ. quarter past six ಆರೂಕಾಲು ಗಂಟೆ; ಆರು ಹೊಡೆದು ಕಾಲು ಗಂಟೆ ಆಗಿದೆ.
  16. (ಬ್ರಿಟಿಷ್‍ ಪ್ರಯೋಗ) ಪಾದ; ಕಾಲುಭಾಗ; ತೆರಿಗೆ ಮೊದಲಾದವನ್ನು ವಿಧಿಸುವಲ್ಲಿ 25 ಪೌಂಡಿಗೆ ಸಮವೆಂದು ಭಾವಿಸಲಾದ ಆಸ್ತಿಯ ಯಾ ಆದಾಯದ ಭಾಗ.
    1. ದಿಗ್ಭಾಗ; ದಿಕ್ಕು.
    2. ಆ ದಿಕ್ಕಿನಲ್ಲಿರುವ – ಪ್ರದೇಶ, ಎಡೆ: the wind blows from all quarters at once ಗಾಳಿಯು ಏಕಕಾಲದಲ್ಲಿ ಎಲ್ಲ ದಿಕ್ಕುಗಳಿಂದಲೂ ಬೀಸುತ್ತಿದೆ. flocked in from all quarters ಎಲ್ಲೆಡೆಗಳಿಂದಲೂ ಗುಂಪುಗುಂಪಾಗಿ ಬಂದು ನೆರೆದರು.
  17. ಸರಬರಾಜಿನ, ನೆರವಿನ – ಮೂಲ, ದಿಕ್ಕು, ಕ್ಷೇತ್ರ: no help to be looked for from that quarter ಆ ಮೂಲದಿಂದ ಯಾವ ನೆರವನ್ನೂ ನಿರೀಕ್ಷಿಸಲಾಗದು.
  18. (ಮುಖ್ಯವಾಗಿ ಒಂದು ವಿಶೇಷ ವರ್ಗದವರಿಗೆ ಮೀಸಲಾದ ಯಾ ಅಂಥ ವರ್ಗವು ವಾಸಿಸುವ) ನಗರಭಾಗ; ಕೇರಿ: the Jewish quarter ಯೆಹೂದ್ಯ ಕೇರಿ. residential quarter ಜನಗಳ ನಿವಾಸ ಭಾಗ.
  19. (ಬಹುವಚನದಲ್ಲಿ)
    1. ಬೀಡು; ವಸತಿ; ನಿವಾಸ.
    2. (ಮುಖ್ಯವಾಗಿ ಸೈನ್ಯಗಳ) ಬೀಡು; ಬಿಡದಿ; ಬಿಡಾರ; ನೆಲೆ; ಶಿಬಿರ; ಪಾಳೆಯ; ಠಾಣೆ: winter quarters (ಮುಖ್ಯವಾಗಿ ಸೈನ್ಯದ) ಚಳಿಗಾಲದ ಪಾಳೆಯ.
  20. (ಸಮರದಲ್ಲಿ ಶರಣಾಗತನಾದ ಶತ್ರುವಿಗೆ ಕೊಟ್ಟ ಯಾ ಶರಣಾಗತನಾಗಲೊಪ್ಪುವ ಶತ್ರುವಿಗೆ ಕೊಡುವುದಾಗಿ ಹೇಳುವ) ಪ್ರಾಣದಾನ; ಅಭಯ (ಪ್ರದಾನ): ask for quarter ಪ್ರಾಣದಾನ ಕೇಳಿಕೊ. cry quarter ಅಭಯ ನೀಡಿ ಎಂದು ಬೇಡಿಕೊ.
  21. ಕಾಲು ಮೈಲಿಯ ಓಟದ ಪಂದ್ಯ ಯಾ ಓಟದ ಪಂದ್ಯದಲ್ಲಿ ಕಾಲು ಭಾಗದ ದೂರ: won the quarter ಕಾಲು ಮೈಲಿಯ ಓಟದ ಪಂದ್ಯವನ್ನು ಗೆದ್ದಿದ್ದಾನೆ.
  22. (ಅಮೆರಿಕನ್‍ ಮತ್ತು ಆಸ್ಟ್ರೇಲಿಯನ್‍ ಕಾಲ್ಚೆಂಡಾಟ) ಕ್ವಾರ್ಟರು; ಪಂದ್ಯದ ನಾಲ್ಕು ಸಮನಾದ ಕಾಲಾವಧಿಗಳಲ್ಲಿ ಒಂದು.
See also 1quarter
2quarter ಕ್ವಾರ್ಟರ್‍
ಸಕರ್ಮಕ ಕ್ರಿಯಾಪದ
  1. ನಾಲ್ಕಾಗಿಸು; ನಾಲ್ಕು ಮಾಡು; ಚತುರ್ಥೀಕರಿಸು; ನಾಲ್ಕು ಸಮಭಾಗಗಳನ್ನಾಗಿ ವಿಭಾಗಿಸು.
  2. (ಚರಿತ್ರೆ) (ದೇಶ ಯಾ ರಾಜದ್ರೋಹಿಯ ತ ದೇಹವನ್ನು) ಕಾಲುಭಾಗಗಳನ್ನಾಗಿ ತುಂಡರಿಸು.
  3. (ವಂಶಲಾಂಛನ ವಿದ್ಯೆ)
    1. ವಂಶಲಾಂಛನವನ್ನು ಗುರಾಣಿಯ ಚತುರ್ಥಾಂಶಗಳಲ್ಲಿ ಕೆತ್ತು.
    2. ತನ್ನ ಸಾಲಿನ ವಂಶಲಾಂಛನದೊಡನೆ ಬೇರೊಬ್ಬನ ವಂಶಲಾಂಛನವನ್ನೂ ಸೇರಿಸು.
    3. (ಗುರಾಣಿಯನ್ನು) ವಿಭಾಗಿಸು; ಉದ್ದ ಯಾ ಅಡ್ಡ ಗೆರೆಗಳಿಂದ ನಾಲ್ಕು ಯಾ ಹೆಚ್ಚಿನ ಮನೆಗಳನ್ನಾಗಿ ವಿಭಾಗಿಸು.
    4. ಪರ್ಯಾಯ ಮನೆಗಳಲ್ಲಿ, ಭಾಗಗಳಲ್ಲಿ ಇರಿಸು.
  4. (ಮುಖ್ಯವಾಗಿ ಸೈನಿಕರನ್ನು)
    1. ಬಿಡದಿಗಳಲ್ಲಿ ಇಳಿಸು, ಇರಿಸು; ಬೀಡುಬಿಡಿಸು.
    2. ಯಾವುದೇ ಊರಿನ ನಿವಾಸಿಗಳ ಮನೆಗಳಲ್ಲಿ ಬಲವಂತದಿಂದ ಇರಿಸು, ಸ್ಥಾಪಿಸು.
    3. ನಿರ್ದಿಷ್ಟ ಸ್ಥಳದಲ್ಲಿ ಸ್ಥಾಪಿಸು ಯಾ ನೆಲೆಗೊಳಿಸು.
  5. (ಬೇಟೆನಾಯಿಗಳ ವಿಷಯದಲ್ಲಿ, ಬೇಟೆಯನ್ನರಸುತ್ತ) ಎಲ್ಲೆಡೆ ಸುತ್ತಾಡು; ದಿಕ್ಕು ದಿಕ್ಕುಗಳನ್ನೆಲ್ಲ ಸಂಚರಿಸು; ದಶದಿಕ್ಕುಗಳನ್ನೂ ಸುತ್ತಾಡು.
  6. (ಮರದ ದಿಮ್ಮಿಯನ್ನು) ನಾಲ್ಕು ಭಾಗಗಳಾಗಿ ತುಂಡರಿಸಿ, ಹಲಗೆ ಕೊಯ್ಯು, ಎಳೆರಚನೆ ಚೆನ್ನಾಗಿ ಎದ್ದುಕಾಣುವಂತೆ ಅದನ್ನು ಹಲಗೆಗಳಾಗಿ ಕತ್ತರಿಸು.