See also 2quarry  3quarry  4quarry
1quarry ಕ್ವಾರಿ
ನಾಮವಾಚಕ
(ಬಹುವಚನ quarries).
  1. (ಹಾಸು ಬಂಡೆಯಿಂದ ಕಲ್ಲನ್ನೆಬ್ಬಿಸಿ ತೆಗೆಯುವಲ್ಲಿ ಉಂಟಾದ) ತೋಡುಕುಳಿ; ಕಲ್ಲುಗುಣಿ.
  2. ಕಲ್ಲುಗಣಿ; ಬಂಡೆನೆಲೆ; ಶಿಲಾಶಯ; ಶಿಲಾಪಾತ್ರ; ಕಲ್ಪಣಿ; ಕಲ್ಲನ್ನು ಅಗೆದು ತೆಗೆಯಬಹುದಾದ ಸ್ಥಳ.
  3. (ರೂಪಕವಾಗಿ) ಸುದ್ದಿ, ಸಮಾಚಾರ, ಮಾಹಿತಿ, ಮೊದಲಾದವುಗಳ – ಮೂಲ, ಆಕರ.
See also 1quarry  3quarry  4quarry
2quarry ಕ್ವಾರಿ
ಸಕರ್ಮಕ ಕ್ರಿಯಾಪದ
  1. (ಕಲ್ಲುಗಣಿಯಿಂದ) ಕಲ್ಲು ತೆಗೆ, ಅಗೆ; ಕಲ್ಲೆಬ್ಬಿಸು.
  2. (ಗ್ರಂಥ ಮೊದಲಾದವುಗಳಿಂದ, ವಾಸ್ತವಾಂಶಗಳು ಮೊದಲಾದವನ್ನು) ಪ್ರಯಾಸಪಟ್ಟು ಸಂಗ್ರಹಿಸು.
ಅಕರ್ಮಕ ಕ್ರಿಯಾಪದ

ಪ್ರಯಾಸದಿಂದ (ದಾಖಲೆಗಳು ಮೊದಲಾದವನ್ನು) ಹುಡುಕು.

See also 1quarry  2quarry  4quarry
3quarry ಕ್ವಾರಿ
ನಾಮವಾಚಕ
(ಬಹುವಚನ quarries).
  1. (ಮಾಂಸಾಹಾರಿಯಾದ ಪಕ್ಷಿ, ಬೇಟೆನಾಯಿ, ಬೇಟೆಗಾರ, ಮೊದಲಾದವರು ಬೆನ್ನಟ್ಟುವ) ಬೇಟೆ; ಶಿಕಾರಿ.
  2. (ರೂಪಕವಾಗಿ) ಬೇಟೆ; ಒಬ್ಬನು ಅರಸುವ, ಹಿಡಿಯಲು ಬೆನ್ನಟ್ಟುವ ವ್ಯಕ್ತಿ ಯಾ ವಸ್ತು.
See also 1quarry  2quarry  3quarry
4quarry ಕ್ವಾರಿ
ನಾಮವಾಚಕ
  1. (ಜಾಲರಿ ಕಿಟಕಿಗಳಿಗೆ ಬಳಸುವ) ವಜ್ರಾತಿಯ ಗಾಜು.
  2. ಹಾಸು ಬಿಲ್ಲೆ; ನೆಲಕ್ಕೆ ಹಾಸುವ ಹೊಳಪಿಲ್ಲದ ಬಿಲ್ಲೆ.
ಪದಗುಚ್ಛ

quarry tile = 4quarry\((2)\).