quantum ಕ್ವಾಂಟಂ
ನಾಮವಾಚಕ
(ಬಹುವಚನ quanta ಉಚ್ಚಾರಣೆ ಕ್ವಾಂಟ).
  1. ಮೊತ್ತ; ಪರಿಮಾಣ; ರಾಶಿ.
  2. ಪಾಲು; ಭಾಗ.
  3. ಅಗತ್ಯವಾದ ಯಾ ಅಪೇಕ್ಷಿತವಾದ ಯಾ ದತ್ತವಾದ—ಪರಿಮಾಣ; ಬೇಕಾದ, ಬಯಸಿದ ಯಾ ಪಾಲಿಗೆ ಬಂದ ಮೊತ್ತ.
  4. (ಭೌತವಿಜ್ಞಾನ) ಕ್ವಾಂಟಮ್‍:
    1. ವಿಕಿರಣ ರೂಪದ ಶಕ್ತಿಯು ಆ ವಿಕಿರಣದ ಆವರ್ತನಕ್ಕೆ ಅನುಲೋಮವಾಗಿರುವ ನಿಶ್ಚಿತ ಭಾಗ.
    2. ಬೇರಾವುದೇ ಭೌತಪರಿಮಾಣದ ಅಂಥದೇ ನಿಶ್ಚಿತ ಭಾಗ.