quantity ಕ್ವಾಂಟಿಟಿ
ನಾಮವಾಚಕ
(ಬಹುವಚನ quantities).
  1. ಪರಿಮಾಣ:
    1. ಯಾವುದೇ ಬಗೆಯ ಅಳತೆಯಿಂದ ನಿರ್ಣಯಿಸಬಹುದಾದ (ವಸ್ತುಗಳ) ಲಕ್ಷಣ.
    2. ಗಾತ್ರ, ವಿಸ್ತಾರ, ತೂಕ, ಮೊತ್ತ, ಸಂಖ್ಯೆ – ಈ ಲಕ್ಷಣಗಳನ್ನು ಪಡೆದಿರುವಿಕೆ: mathematics is the science of pure quantity ಗಣಿತವು ಶುದ್ಧಾಂಗವಾಗಿ ಪರಿಮಾಣವನ್ನು ಕುರಿತು ವಿಜ್ಞಾನ.
  2. ಮೊತ್ತ; ಪ್ರಮಾಣ; ಪರಿಮಾಣ: quantity of the current depends on the size of the plates ವಿದ್ಯುತ್ಪ್ರವಾಹದ ಮೊತ್ತವು ತಗಡುಗಳ ಗಾತ್ರವನ್ನು ಅವಲಂಬಿಸುತ್ತದೆ.
  3. (ಯಾವುದೇ ವಸ್ತುವಿನ ಯಾ ವಸ್ತುಗಳ) ನಿಗದಿಯಾದ ಯಾ ಗಣನೀಯವಾದ ಭಾಗ ಮೊತ್ತ ಯಾ ಸಂಖ್ಯೆ; ಪರಿಮಾಣ: the quantity of heat in the animal body ಪ್ರಾಣಿ ದೇಹದ ಶಾಖದ ಪರಿಮಾಣ. a quantity of baskets ಬುಟ್ಟಿಗಳ ಸಂಖ್ಯೆ; ಕೆಲವು ಬುಟ್ಟಿಗಳು.
  4. (ಬಹುವಚನದಲ್ಲಿ) ಅಧಿಕ ಪ್ರಮಾಣಗಳು ಯಾ ಸಂಖ್ಯೆಗಳು; ವೆಗ್ಗಳ; ಹೇರಳ; ಸಮೃದ್ಧಿ: it is found in quantities on the shore ಅದು ತೀರ ಪ್ರದೇಶದಲ್ಲಿ ಹೇರಳವಾಗಿ ದೊರೆಯುತ್ತದೆ.
  5. (ಛಂದಸ್ಸು) ಮಾತ್ರೆ; ಸ್ವರಾಕ್ಷರಗಳ ಹ್ರಸ್ವತೆ ಯಾ ದೀರ್ಘತೆ; ಸ್ವರಗಳನ್ನು ಉಚ್ಚರಿಸುವಲ್ಲಿ ಹಿಡಿಯುವ ಕಾಲ ಪ್ರಮಾಣ.
  6. (ತರ್ಕಶಾಸ್ತ್ರ) ವ್ಯಾಪ್ತಿ; ವಿನಿಯೋಗ; ತಾರ್ಕಿಕ ವಾಕ್ಯದಲ್ಲಿ ‘ಎಲ್ಲ’, ‘ಕೆಲವು’ ಯಾ ‘ಹಲವು’ ಎಂಬ ಕರ್ತೃವಿಶೇಷಣಗಳಿಂದ ತಿಳಿದುಬರುವ, ವಿಧೇಯ ಪದದ ಅರ್ಥವು ಕರ್ತೃವಿನ ಜಾತಿಗೆ ಪೂರ್ಣವಾಗಿ ಅನ್ವಯಿಸುತ್ತದೆಯೇ ಇಲ್ಲವೇ, ಅದರ ಅಂಶಮಾತ್ರಕ್ಕೆ ಅನ್ವಯಿಸುತ್ತದೆಯೇ ಎಂಬುದನ್ನು ತಿಳಿಸುವ ಲಕ್ಷಣ.
  7. (ಗಣಿತ)
    1. ಪರಿಮಾಣ; ಗಾತ್ರ, ತೂಕ, ಸಂಖ್ಯೆ, ಮೊದಲಾದ ಅಳೆಯಬಹುದಾದ ಲಕ್ಷಣವುಳ್ಳದ್ದು.
    2. ಅಂಥ ಪರಿಮಾಣವನ್ನು ಸೂಚಿಸುವ ಸಂಕೇತ ಯಾ ಸಂಖ್ಯೆ.
ಪದಗುಚ್ಛ
  1. negligible quantity
    1. ಗಣನೆ ಮಾಡದೆ ಬಿಟ್ಟುಬಿಡಬಹುದಾದಷ್ಟು ಅಲ್ಪ ಪ್ರಮಾಣದ ರಾಶಿ ಯಾ ಸಂಖ್ಯೆ; ಅಗಣ್ಯ ರಾಶಿ ಯಾ ಸಂಖ್ಯೆ.
    2. (ರೂಪಕವಾಗಿ) ಅಗಣ್ಯ ವ್ಯಕ್ತಿ; ಲೆಕ್ಕಕ್ಕೆ ಬಾರದ ವ್ಯಕ್ತಿ.
  2. unknown quantity (ರೂಪಕವಾಗಿ) ಅಜ್ಞಾತ – ವ್ಯಕ್ತಿ, ವಿಷಯ ಯಾ ವಸ್ತು; ಸ್ವರೂಪ, ಚರ್ಯೆ, ಮೊದಲಾದವನ್ನು ಅರಿಯಲಾಗದ ವ್ಯಕ್ತಿ, ವಿಷಯ, ವಸ್ತು.