See also 2quality
1quality ಕ್ವಾಲಿಟಿ
ನಾಮವಾಚಕ

(ಬಹುವಚನ qualities).

  1. ಮೇಲ್ಮೆಯ ಮಟ್ಟ; ಗುಣಮಟ್ಟ; ಶ್ರೇಷ್ಠತೆಯ ದರ್ಜೆ: of good quality ಉತ್ತಮ ದರ್ಜೆಯ. poor in quality ಕೀಳು ದರ್ಜೆಯ. quality matters more than quantity ಪ್ರಮಾಣಕ್ಕಿಂತ ಗುಣಕ್ಕೆ ಮಹತ್ವ ಹೆಚ್ಚು.
  2. (ಸಾಮಾನ್ಯ ಷ್ಟಿಯಿಂದ) ಉತ್ಕೃಷ್ಟತೆ; ಉತ್ತಮವಾಗಿರುವಿಕೆ; ಚೆನ್ನಾಗಿರುವಿಕೆ: has quality ಚೆನ್ನಾಗಿದೆ; ಉತ್ಕೃಷ್ಟವಾಗಿದೆ.
  3. ಸಹಜ ಗುಣ ಯಾ ಶಕ್ತಿ, ಸಾಮರ್ಥ್ಯ; ಸ್ವಭಾವಜನ್ಯ ಗುಣ (ಯಾ ದೋಷ): he has many good qualities ಅವನಲ್ಲಿ ಅನೇಕ ಸಹಜ ಗುಣಗಳಿವೆ. the defects of his qualities ಅವನ ಸ್ವಭಾವಜನ್ಯ ದೋಷಗಳು.
  4. ವೈಶಿಷ್ಟ್ಯ; ವಿಶಿಷ್ಟ ಗುಣ, ಲಕ್ಷಣ; ವಿಶಿಷ್ಟ ಪ್ರಭಾವ, ಮಹಿಮೆ: gives a taste of his quality ತನ್ನ ವೈಶಿಷ್ಟ್ಯದ ರುಚಿಯನ್ನು, ಮಹಿಮೆಯನ್ನು ತೋರಿಸುತ್ತಾನೆ.
  5. (ಒಬ್ಬನಿಗೆ) ತಕ್ಕ, ಸಲ್ಲುವ, ಉಚಿತವಾದ, ಯೋಗ್ಯವಾದ – ಗುಣ: the qualities of a ruler ರಾಜೋಚಿತ ಗುಣಗಳು; ರಾಜಯೋಗ್ಯ ಲಕ್ಷಣಗಳು.
  6. ವಸ್ತುವೊಂದರ ತುಲನಾತ್ಮಕ – ಸ್ವರೂಪ, ಬಗೆ, ಮಾದರಿ, ನಮೂನೆ ಯಾ ರಖಮು: is made in three qualities ಮೂರು ರಖಂಗಳಲ್ಲಿ ತಯಾರಿಸಲಾಗಿದೆ.
  7. ಬೌದ್ದಿಕ ಯಾ ನೈತಿಕ – ಗುಣ, ವಿಶೇಷ: the quality of mercy ದಯಾಗುಣ.
  8. (ಪ್ರಾಚೀನ ಪ್ರಯೋಗ) ವರಿಷ್ಠತೆ; ಉನ್ನತ – ವರ್ಗ; ಅಂತಸ್ತು; ಮೇಲ್ದರ್ಜೆ: people of quality ವರಿಷ್ಠರು; ಉನ್ನತ ಅಂತಸ್ತಿನವರು. the quality ವರಿಷ್ಠ ವರ್ಗ.
  9. (ತರ್ಕಶಾಸ್ತ್ರ) (ತಾರ್ಕಿಕ ಪ್ರತಿಜ್ಞಾವಾಕ್ಯದ ವಿಷಯದಲ್ಲಿ) ಭಾವಾತ್ಮಕತೆ ಯಾ ಅಭಾವಾತ್ಮಕತೆ; ಅಸ್ತ್ಯರ್ಥಕವಾಗಿ ಯಾ ನಾಸ್ತ್ಯರ್ಥಕವಾಗಿ ಸ್ವರೂಪ ಇರುವಿಕೆ, ಉದಾಹರಣೆಗೆ all men are mortal ಎಲ್ಲ ಮಾನವರೂ ಮರ್ತ್ಯರು (ಅಸ್ತ್ಯರ್ಥಕ). some men are not honest ಕೆಲವು ಮಾನವರು ಪ್ರಾಮಾಣಿಕರಲ್ಲ (ನಾಸ್ತ್ಯರ್ಥಕ).
  10. (ಶಬ್ದ, ವಾಕ್ಕು, ಮೊದಲಾದವುಗಳ ವಿಷಯದಲ್ಲಿ) ವಿಶಿಷ್ಟ ಗುಣ, ಲಕ್ಷಣ; ವಿಶಿಷ್ಟತೆ; ವೈಶಿಷ್ಟ್ಯ; ಉಚ್ಚತೆ, ಗಂಭೀರತೆ, ದುತ್ವ, ಮೊದಲಾದ ಗುಣಗಳಿಂದ ಭಿನ್ನವಾದ ವ್ಯ\-ಕ್ತಿಯನ್ನು ಗುರುತಿಸಲು ನೆರವಾಗುವ ಲಕ್ಷಣ.
See also 1quality
2quality ಕ್ವಾಲಿಟಿ
ಗುಣವಾಚಕ

ಉತ್ತಮ ದರ್ಜೆಯ; ಶ್ರೇಷ್ಠ ಗುಣದ: quality product ಉತ್ತಮ ದರ್ಜೆಯ ಉತ್ಪನ್ನ.