qualify ಕ್ವಾಲಿಫೈ
ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ qualifies; ಭೂತರೂಪ ಮತ್ತು ಭೂತಕೃದಂತ\qualified).

ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ ಯಾ ವಿಷಯಕ್ಕೆ ಯಾವುದೇ ಗುಣ ಮೊದಲಾದವನ್ನು) ಆರೋಪಿಸು; ಅಂತಿರುವಂತೆ ವರ್ಣಿಸು, ನಿರೂಪಿಸು: qualify the proposal as iniquitous ಸಲಹೆಯನ್ನು ಅನ್ಯಾಯವಾದದ್ದೆಂದು ಆರೋಪಿಸು.
  2. (ವ್ಯಾಕರಣ) (ಪದದ, ಮುಖ್ಯವಾಗಿ ಗುಣವಾಚಕದ ವಿಷಯದಲ್ಲಿ) ವಿಶೇಷಿಸು; ಇನ್ನೊಂದು ಪದಕ್ಕೆ ಮುಖ್ಯವಾಗಿ ನಾಮಪದಕ್ಕೆ, ಗುಣವೊಂದನ್ನು ಅನ್ವಯಿಸು: adjectives qualify nouns ವಿಶೇಷಣಗಳು ನಾಮವಾಚಕಗಳನ್ನು ವಿಶೇಷಿಸುತ್ತವೆ.
  3. ಅರ್ಹನನ್ನಾಗಿಸು; ದಕ್ಷನನ್ನಾಗಿಸು; ಒಂದು ಹುದ್ದೆಗೆ ಯಾ ಉದ್ದೇಶಕ್ಕೆ ಯೋಗ್ಯವಾಗುವಂತೆ ಮಾಡು.
  4. ಕಾನೂನು ಮೇರೆಗೆ ಹಕ್ಕುಳ್ಳವನನ್ನಾಗಿ ಮಾಡು; ಅಧಿತನನ್ನಾಗಿಸು.
  5. (ಹೇಳಿಕೆಯನ್ನು ಯಾ ಅಭಿಪ್ರಾಯವನ್ನು) ಸೀಮಿತಗೊಳಿಸು; (ಪರಿಮಿತಿಗಳಿಗೆ, ಷರತ್ತುಗಳಿಗೆ, ಉಪಾಧಿಗಳಿಗೆ ಒಳಪಡಿಸುವುದರ ಮೂಲಕ, ಹೇಳಿಕೆಯ ಯಾ ಅಭಿಪ್ರಾಯದ) ವ್ಯಾಪ್ತಿಯನ್ನು ಕಡಿಮೆಮಾಡು.
  6. (ಅನುಭವ ಮೊದಲಾದವುಗಳ) ತೀವ್ರತೆಯನ್ನು – ತಗ್ಗಿಸು, ಕುಗ್ಗಿಸು; ಕಡಿಮೆ ಮಾಡು.
  7. (ದ್ರವದ) (ಸಾಂದ್ರತೆಯನ್ನು ಯಾ ರುಚಿಯನ್ನು) ಮಾರ್ಪಡಿಸು; ವ್ಯತ್ಯಾಸಮಾಡು.
  8. ಒಂದು ನಿರ್ದಿಷ್ಟ ಗುಣವನ್ನು ಆರೋಪಿಸು, – ಎಂದು ವಿವರಿಸು: the idea was qualified as absurd ಆ ಅಭಿಪ್ರಾಯವನ್ನು ಅರ್ಥಹೀನವೆಂದು ಆರೋಪಿಸಲಾಯಿತು.
ಅಕರ್ಮಕ ಕ್ರಿಯಾಪದ

(ಹುದ್ದೆ, ಸ್ಥಾನ, ಅಧಿಕಾರ, ಪುರಸ್ಕಾರ, ಮೊದಲಾದವನ್ನು ಪಡೆಯಲು ನಿಗದಿಯಾದ ಷರತ್ತುಗಳನ್ನು ಯಾ ಅಗತ್ಯಗಳನ್ನು ಪೂರೈಸಿ) ಅರ್ಹನಾಗು; ಅರ್ಹತೆ ಗಳಿಸು.