qualification ಕ್ವಾಲಿಫಿಕೇಷನ್‍
ನಾಮವಾಚಕ
    1. ಪರಿಮಿತಿ: statement with many qualifications ಹಲವು ಪರಿಮಿತಿಗಳುಳ್ಳ ಹೇಳಿಕೆ.
    2. ಉಪಾಧಿಯನ್ನು ಹೊಂದಿರುವುದು ಯಾ ಉಪಾಧಿ ಆಗಿರುವುದು.
    3. ಪರಿಮಿತಿ; ಪರಿಚ್ಛೇದ; ಪರಿಮಿತಿಗೊಳಿಸುವ ಸಂದರ್ಭ ಯಾ ಪರಿಸ್ಥಿತಿ.
    4. (ಯಾವುದೇ ವಸ್ತುವಿನ ಯಾ ವಿಷಯದ ಯಾ ತತ್ತ್ವದ) ಪರಿಚ್ಛಿನ್ನತೆ; ಪೂರ್ಣತೆ ಯಾ ನಿರುಪಾಧಿಕತೆಯಲ್ಲಿ ನ್ಯೂನತೆ: his delight had one qualification ಅವನ ಸಂತೋಷದಲ್ಲಿ ಒಂದು ನ್ಯೂನತೆಯಿತ್ತು.
  1. (ಹುದ್ದೆ ಮೊದಲಾದವಕ್ಕೆ ಒಬ್ಬನನ್ನು ತಕ್ಕವನನ್ನಾಗಿ ಮಾಡುವ) ಅರ್ಹತೆ; ಯೋಗ್ಯತೆ; ಕ್ಷಮತೆ.
  2. ಹಕ್ಕನ್ನು ಪಡೆದುಕೊಳ್ಳುವ ಯಾ ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ
    1. ನೆರವೇರಿಸಲೇ ಬೇಕಾದ – ಷರತ್ತು, ನಿಯಮ.
    2. ತೋರಿಸಬೇಕಾದ – ಪ್ರಮಾಣಪತ್ರ, ಅರ್ಹತಾಪತ್ರ: the qualification for citizenship may be a certain income ಪೌರತ್ವದ ಹಕ್ಕನ್ನು ಪಡೆಯಲು ನಿಗದಿಯಾದ ವರಮಾನ ಒಂದು ಅರ್ಹತೆಯಾಗಬಹುದು.
  3. ಯಾವುದೇ ಗುಣ ಮೊದಲಾದವನ್ನು ಆರೋಪಿಸುವುದು; ಆರೋಪ: the qualification of his policy as opportunistic is unfair ಅವನ ನೀತಿಗೆ ಸಮಯಸಾಧಕತ್ವವನ್ನು ಆರೋಪಿಸುವುದು ನ್ಯಾಯವಲ್ಲ.