quadruplet ಕ್ವಾಡ್ರು(ಡ್ರೂ)ಪ್ಲಿಟ್‍
ನಾಮವಾಚಕ
  1. ಚತುಷ್ಟಯ; ಒಂದೇ ಹೆರಿಗೆಯಲ್ಲಿ ಒಟ್ಟಿಗೆ ಹುಟ್ಟಿದ ನಾಲ್ಕು ಕೂಸುಗಳು.
  2. (ಹೊಂದಿಕೆಯಾಗಿ ಕೆಲಸ ಮಾಡುವ) ನಾಲ್ಕು ಸಾಧನಗಳು; ಸಾಧನ ಚತುಷ್ಟಯ.
  3. (ಸಂಗೀತ) ಸ್ವರಚತುಷ್ಟಯ; ಮೂರು ಸ್ವರಗಳನ್ನು ನುಡಿಸುವ ಅವಧಿಯಲ್ಲಿ ನುಡಿಸಬೇಕಾದ ನಾಲ್ಕು ಸ್ವರಗಳ ತಂಡ.