proverb ಪ್ರಾವರ್ಬ್‍
ನಾಮವಾಚಕ
  1. ಗಾದೆ; ನಾಣ್ಣುಡಿ; ವಚನ; ಲೋಕೋಕ್ತಿ; ಸಾಮತಿ; ಪ್ರಹೇಳಿಕೆ.
  2. ಗಾದೆ; ಆಡುಮಾತು; ಕುಪ್ರಸಿದ್ಧ ವ್ಯಕ್ತಿ ಯಾ ವಸ್ತು: ignorant to a proverb ಮನೆಯ ಮಾತಾಗುವಷ್ಟು, ಗಾದೆಯಾಗಿ ಹೋಗುವಷ್ಟು ಅಜ್ಞಾನಿಯಾದ ಯಾ ಅಜ್ಞಾನವುಳ್ಳ. their fickleness is a proverb ಅವರ ಚಂಚಲ ಸ್ವಭಾವವು ಕುಪ್ರಸಿದ್ಧವಾಗಿಬಿಟ್ಟಿದೆ, ಕುಖ್ಯಾತವಾಗಿದೆ. he is a proverb for inaccuracy ಅನಿಷ್ಕೃಷ್ಟತೆಗೆ ಅವನೊಂದು ಆಡುಮಾತಾಗಿ ಬಿಟ್ಟಿದ್ದಾನೆ, ಗಾದೆಯೇ ಆಗಿಹೋಗಿದ್ದಾನೆ.
  3. ಗಾದೆಯ ಆಧಾರದಿಂದ ಬರೆದ (ಹೆಂಚ್‍ ಸಾಹಿತ್ಯದ) ನಾಟಕ.
  4. (ಬಹುವಚನದಲ್ಲಿ) ಗಾದೆಯಾಟ; ಒಬ್ಬ ಆಟಗಾರನು ಪ್ರಶ್ನೆಯ ಸರದಿಯಿಂದ ಜೊತೆಯ ಆಟಗಾರರನ್ನು ಪ್ರಶ್ನಿಸಿ ಪ್ರತಿ ಉತ್ತರದಿಂದಲೂ ಗಾದೆಯ ಒಂದು ಪದವನ್ನು ಊಹಿಸಿ ಗಾದೆಯನ್ನು ಕಟ್ಟುವ ಆಟ.
ಪದಗುಚ್ಛ

Proverbs or Book of Proverbs (ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ) ಗಾದೆಗಳ ಪ್ರಕರಣ.