See also 2promenade
1promenade ಪ್ರಾಮನಾಡ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ವ್ಯಾಯಾಮ, ಪ್ರದರ್ಶನ, ಸಾಮಾಜಿಕ ಉತ್ಸವಗಳು, ಮೊದಲಾದವಕ್ಕಾಗಿ ಮಾಡುವ) ವಿಹಾರ ಸಂಚಾರ; ಸಂಚಾರ; ತಿರುಗಾಟ ಯಾ ಕುದುರೆ ಸವಾರಿ.
  2. (ಬ್ರಿಟಿಷ್‍ ಪ್ರಯೋಗ) (ಪ್ರವಾಸಿತಾಣದ ಸಮುದ್ರ ಕರೆಯ ಪಕ್ಕದಲ್ಲಿ ಉದ್ದಕ್ಕೂ ಇರುವ, ನೆಲಗಟ್ಟು ಮಾಡಿದ) ಸಾರ್ವಜನಿಕ – ಕಾಲುಹಾದಿ, ಪಾದಚಾರಿ ಪಥ.
  3. (ಬ್ರಿಟಿಷ್‍ ಪ್ರಯೋಗ) ವಿಹಾರಪಥ; ವಿಹಾರಕ್ಕಾಗಿ ಮಾಡಿರುವ (ಮುಖ್ಯವಾಗಿ ನೆಲಗಟ್ಟಿನ) ಸಾರ್ವಜನಿಕ ಪಾದಚಾರಿ ಮಾರ್ಗ.
  4. (ಅಮೆರಿಕನ್‍ ಪ್ರಯೋಗ) ಶಾಲೆಯ ಯಾ ವಿಶ್ವವಿದ್ಯಾನಿಲಯದ ತ್ಯಗೋಷ್ಠಿ.
  5. (ಹಳ್ಳಿಗಾಡಿನ ತ್ಯಕೂಟ ಮೊದಲಾದವುಗಳಲ್ಲಿನ) ನರ್ತಕರ ಮೆರವಣಿಗೆ, ಮೆರವಣಿಗೆಯಲ್ಲಿ ನಡಗೆ.
See also 1promenade
2promenade ಪ್ರಾಮನಾಡ್‍
ಸಕರ್ಮಕ ಕ್ರಿಯಾಪದ
  1. ಒಂದು (ಸ್ಥಳದಲ್ಲಿ) ವಿಹಾರಮಾಡು; ವಿಹರಿಸು.
  2. (ಮುಖ್ಯವಾಗಿ ಪ್ರದರ್ಶನಕ್ಕಾಗಿ ವ್ಯಕ್ತಿ ಮೊದಲಾದವರನ್ನು) ಮೆರವಣಿಗೆ ಮಾಡು; ಮೆರವಣಿಗೆಯಲ್ಲಿ ಕರೆದುಕೊಂಡು ಹೋಗು.
ಅಕರ್ಮಕ ಕ್ರಿಯಾಪದ

ವಿಹಾರಮಾಡು; ವಿಹರಿಸು; ವಿಹಾರಕ್ಕಾಗಿ ತಿರುಗಾಡು, ಓಡಾಡು ಯಾ ಕುದುರೆಸವಾರಿ ಮಾಡು.