procurator ಪ್ರಾಕ್ಯುರೇಟರ್‍
ನಾಮವಾಚಕ
  1. (ರೋಮನ್‍ ಚರಿತ್ರೆ) ಪ್ರಾಕ್ಯುರೇಟರ್‍; (ಸಾಮ್ರ್ಯಾಜ್ಯಕ್ಕೆ ಸೇರಿದ ಪ್ರಾಂತದಲ್ಲಿನ) ಖಜಾಂಚಿ; ಭಂಡಾರಿ; ಬೊಕ್ಕಸದ ಅಧಿಕಾರಿ.
  2. (ವಕಾಲತ್ತು ಪಡೆದಿರುವ ಒಬ್ಬನ) ನಿಯೋಗಿ, ಪ್ರತಿನಿಧಿ ಯಾ ವಕೀಲ.
  3. (ಇಟಲಿಯ ಕೆಲವು ನಗರಗಳಲ್ಲಿ) ಮ್ಯಾಜಿಸ್ಟ್ರೇಟ್‍; ದಂಡಾಧಿಕಾರಿ.
ಪದಗುಚ್ಛ
  1. procurator fiscal (ಬ್ರಿಟಿಷ್‍ ಪ್ರಯೋಗ) (ಸ್ಕಾಟ್‍ಲೆಂಡಿನಲ್ಲಿ ಒಂದು ಜಿಲ್ಲೆಯ) ಸರ್ಕಾರೀ ಆಪಾದಕ, ಅಭಿಯೋಗಿ, ಮುದ್ದಯಿ; ಪಬ್ಲಿಕ್‍ ಪ್ರಾಸಿಕ್ಯೂಟರು.
  2. procurator general
    1. ಖಜಾನೆಯ ಉನ್ನತ ಅಧಿಕಾರಿ.
    2. (ಬ್ರಿಟಿಷ್‍ ಪ್ರಯೋಗ) ಹಣಕಾಸು ಇಲಾಖೆಯ ಕಾನೂನು ವಿಭಾಗದ ಮುಖ್ಯಾಧಿಕಾರಿ.