preoccupy ಪ್ರೀಆಕ್ಯುಪೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ preoccupies; ಭೂತರೂಪ ಮತ್ತು ಭೂತಕೃದಂತ preoccupied).
  1. (ಯೋಚನೆ ಮೊದಲಾದವುಗಳ ವಿಷಯದಲ್ಲಿ) (ಮನಸ್ಸು ಮೊದಲಾದವನ್ನು) ಮೊದಲೇ – ತುಂಬಿರು, ಹಿಡಿದಿರು, ಆವರಿಸಿಕೊಂಡಿರು.
  2. (ಮನಸ್ಸನ್ನು ಯಾವುದೇ ವಿಷಯದಲ್ಲಿ) ಮುಳುಗಿಸಿರು; ಮಗ್ನಗೊಳಿಸಿರು; ಅನ್ಯಮನಸ್ಕನನ್ನಾಗಿ ಮಾಡಿರು.
  3. ಮೊದಲೇ ವಶಪಡಿಸಿಕೊಂಡಿರು; ಪೂರ್ವಭಾವಿಯಾಗಿ ಆಕ್ರಮಿಸಿರು.