precede ಪ್ರಿಸೀಡ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ವಸ್ತು ಯಾ ವಿಷಯಗಳನ್ನು ಕುರಿತಂತೆ, ಅಂತಸ್ತಿನಲ್ಲಿ ಯಾ ಪ್ರಾಮುಖ್ಯದಲ್ಲಿ) ಮೊದಲಿಗನಾಗಿ ಯಾ ಮೊದಲನೆಯದಾಗಿ ಇರು ಯಾ ಬರು; ಅಗ್ರಗಾಮಿಯಾಗಿರು: sons of barons precede baronets ಬ್ಯಾರನ್ನರ ಗಂಡುಮಕ್ಕಳು ಬ್ಯಾರೊನಟ್‍ಗಳಿಗಿಂತ (ಅಂತಸ್ತಿನಲ್ಲಿ) ಮೊದಲಿಗರಾಗಿರುತ್ತಾರೆ. such duties precede all others ಇಂಥ ಕರ್ತವ್ಯಗಳು ಉಳಿದ ಎಲ್ಲಕ್ಕಿಂತ ಮೊದಲನೆಯದಾಗಿರುತ್ತವೆ.
  2. ಕ್ರಮದಲ್ಲಿ (ಮತ್ತೊಂದಕ್ಕಿಂತ) ಮುಂಚೆ, ಮೊದಲು ಬರು: the words that precede this paragraph ಈ ವಾಕ್ಯವೃಂದಕ್ಕೆ ಮೊದಲು ಬರುವ ಪದಗಳು.
  3. (ಕಾಲದಲ್ಲಿ) ಮುಂಚೆ, ಮೊದಲು ಬರು: in the years preceding his accession ಅವನು ಅಧಿಕಾರಕ್ಕೆ, ಪಟ್ಟಕ್ಕೆ ಬಂದ ಮುಂಚಿನ ವರ್ಷಗಳಲ್ಲಿ.
  4. (ಯಾವುದನ್ನೇ) ಮುಂಚೆ, ಮೊದಲು, ಪೂರ್ವಭಾವಿಯಾಗಿ – ಬರುವಂತೆ ಮಾಡು: must precede this measure by milder ones ಈ ಕ್ರಮಕ್ಕೆ ಮುಂಚೆ ಸೌಮ್ಯಕ್ರಮಗಳು ಬರುವಂತೆ ಮಾಡಬೇಕು; ಸೌಮ್ಯಕ್ರಮಗಳು ಈ ಕ್ರಮಕ್ಕೆ ಪೂರ್ವಭಾವಿಯಾಗಿ ಬರಬೇಕು.
ಅಕರ್ಮಕ ಕ್ರಿಯಾಪದ
  1. (ಒಬ್ಬನ) ಮುಂದುಗಡೆ, ಅಗ್ರತಃ – ನಡೆ: preceded by our guide ಮುಂದುಗಡೆ ನಡೆಯುತ್ತಿದ್ದ ಮಾರ್ಗದರ್ಶಕನನ್ನು ಹಿಂಬಾಲಿಸಿ; ಮಾರ್ಗದರ್ಶಕನನ್ನು ಮುಂದಿಟ್ಟುಕೊಂಡು.
  2. (ಒಂದಕ್ಕಿಂತ) ಮುಂಚೆ ಬರು, ನಡೆ: the statistics for the year that preceded ಮುಂಚೆ ಬಂದ ವರ್ಷದ ಅಂಕಿಅಂಶಗಳು.